ಸಾಧಕರ ಹಿಂದೆ ಶಿಕ್ಷಕರ ಶ್ರಮ

byd teach
Published on

ಬ್ಯಾಡಗಿ: ವಿವಿಧ ಕ್ಷೇತ್ರಗಳ ಸಾಧಕರ ಹಿಂದೆ ಶಿಕ್ಷಕರ ಶ್ರಮವಿದ್ದು, ಉತ್ತಮ ಶಿಕ್ಷಣ ನೀಡಿದರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.


ನಿವೃತ್ತ ಡಯಟ್ ಉಪನಿರ್ದೇಶಕ ಡಿ.ಜಿ. ನಂದನ ಉಪನ್ಯಾಸ ನೀಡಿದರು. ನಿವೃತ್ತ ಶಿಕ್ಷಕರಾದ ಬಿ.ಡಿ. ಗುದಗಿ, ವಾಯ ಶಾಂತಮ್ಮ, ಎಸ್.ಜಿ. ಬಡಿಗೇರ, ಶಿವಯೋಗಿ ರೂಗಿ, ಬಿ.ಎಫ್. ದೊಡ್ಡಮನಿ, ಡಿ.ಆರ್. ಮಂಜುನಾಥ, ಎ.ವಿ. ಪಾಟೀಲ, ವಿ.ಸಿ. ಹಾವೇರಿಮಠ, ಟಿ.ಎಂ. ಕೊಕ್ಕರಗುಂದಿ, ಎಸ್.ಎಸ್. ನರೇಗಲ್ಲ, ಶಿವಾನಾಯಕ, ಎಸ್.ಆರ್. ಶಿಡೇನೂರು, ಟಿ.ಐ. ಪಠಾಣ, ಮಲ್ಲಪ್ಪ ಎಂಆರ್‌ವಿ ವಾಲ್ಮೀಕಿ ಅವರನ್ನು ಗೌರವಿಸಿ ಸನ್ಮಾನಿಲಾಯಿತು.

ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಎಸ್.ಆರ್. ಪಾಟೀಲ, ತಾಪಂ ಇಒ ಮಲ್ಲಿಕಾರ್ಜುನ ಕೆ.ಎಂ, ತಹಸೀಲ್ದಾರ್ ಎಸ್. ಎ.ಪ್ರಸಾದ, ಎನ್.ತಿಮ್ಮಾರೆಡ್ಡಿ, ಎಂ.ಎಫ್. ಕರಿಯಣ್ಣನವರ, ಜೆ.ಎಸ್. ಹೆರೂರು, ಎಸ್.ಜಿ. ಕೋಟೆ, ಬಿ.ಎಂ.ಜಗಾಪುರ, ಪುರಸಭೆ ಸದಸ್ಯರಾದ ಫಕೀರಮ್ಮ ಚಲವಾದಿ, ಕಲಾವತಿ ಬಡಿಗೇರ, ಕವಿತಾ ಸೊಪ್ಪಿನಮಠ, ಈರಣ್ಣ ಬಣಕಾರ, ಸರೋಜ ಉಳ್ಳಾಗಡ್ಡಿ, ಮಲ್ಲಮ್ಮ ಪಾಟೀಲ, ಇತರರು ಇದ್ದರು. ಸಂಗೀತ ಶಿಕ್ಷಕ ಪ್ರಕಾಶ ಕೊರಮರ, ಶ್ರೀದೇವಿ ಕಾಳಪ್ಪನವರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net