ಕೈ ಸಭೆಯಲ್ಲಿ ಗದ್ದಲ ಮಾಡಿದವರ ತಲೆದಂಡ!

Published on

ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಸೇರಿ ಹಲವರ ಉಚ್ಚಾಟನೆ

ಕೋಲಾರ; ಜಿಲ್ಲಾ ಕಾಂಗ್ರೆಸ್​ನ ವಿವಿಧ ಟಕಗಳ ಸಂಟನಾ ಸಭೆಯಲ್ಲಿ ನಡೆದ ಗಲಾಟೆ ಸಂಬಂಧ ಅಶಿಸ್ತು ತೋರಿರುವ ಹಲವರನ್ನು ಉಚ್ಚಾಟನೆ ಮಾಡಲಾಗಿದೆ.
ಪಕ್ಷದ ಸಭೆಗಳಲ್ಲಿ ಅಶಿಸ್ತು ತೋರಿರುವ ಆರೋಪದಡಿ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಿವಕುಮಾರ್​, ನಗರಸಭೆ ಸದಸ್ಯ ಅಂಬರೀಶ್​, ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿಗೌಡ, ಕಾರ್ಯಕರ್ತ ಉರಟಿ ಅಗ್ರಹಾರ ಚೌಡರೆಡ್ಡಿ ಸೇರಿ ಹಲವರ ತಲೆದಂಡವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ, ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಜಿ.ಮಂಜುನಾಥ್​, ಎಂಎಲ್ಸಿ ಎಂ.ಎಲ್​.ಅನಿಲ್​ಕುಮಾರ್​ ಸಮ್ಮುಖದಲ್ಲೇ ಗಲಾಟೆ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಕೆಲವರು ಪೂರ್ವ ನಿಯೋಜಿತವಾಗಿಯೇ ಸಭೆಯಲ್ಲಿ ಗದ್ದಲ ಮಾಡಿ ಮೊದಲು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಪ್ರಸಾದ್​ಬಾಬು ಅವರನ್ನು ವೇದಿಕೆಯಿಂದ ಹೊರ ಹಾಕಿದರು. ಆನಂತರ ಜಿಲ್ಲಾಧ್ಯಕ್ಷ ಲಕ್ಷಿ$್ಮನಾರಾಯಣ ಅವರನ್ನು ವೇದಿಕೆಯಿಂದ ಕೆಳಗೆ ತಳ್ಳಿ ದರ್ಪ ತೋರಿದ್ದರು. ಇದರಿಂದ ಇಬ್ಬರೂ ಅಸಮಾಧಾನಗೊಂಡಿದ್ದರು. ಈ ಟನೆಯು ಎರಡು ಗುಂಪುಗಳ ನಡುವಿನ ಆರೋಪ&ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.

 ಅಶಿಸ್ತು ತೋರಿದವರ ವಿರುದ್ಧ ಕ್ರಮ
ಅಶಿಸ್ತು ತೋರಿರುವವರನ್ನು ಪಕ್ಷದಿಂದ ಹೊರಗೆ ಹಾಕಿ, ಕ್ರಿಯಾಶೀಲರನ್ನು ಸೇರಿಸಿಕೊಂಡು ಕಾಂಗ್ರೆಸ್​ ಬಲವರ್ಧನೆ ಮಾಡುತ್ತೇವೆ ಎಂದು ಜಿಲ್ಲಾಧ್ಯಕ್ಷ ಲಕ್ಷಿ$್ಮನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಸಭೆಯಲ್ಲಿ ಏಕಾಏಕಿಯಾಗಿ ಬಂದು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಪ್ರಸಾದ್​ಬಾಬು ಅವರನ್ನು ವೇದಿಕೆಯಿಂದ ಹೊರ ಹಾಕುತ್ತಾರೆ, ಏಕೆ ಹೀಗಾಯಿತು ಎಂದು ನನಗೂ ಸೋಜಿಗವಾಯಿತು, ಆ ಸಂದರ್ಭದಲ್ಲಿ ಮೂಕ ಪ್ರೇಕ್ಷಕನಾದೆ, ವಾಸು, ಇತರರು ನನ್ನ ಶರ್ಟ್​ ಹರಿದು ಗೂಂಡಾವರ್ತನೆ ತೋರಿದ್ದಾರೆ ಎಂದು ತಿಳಿಸಿದರು.


ಸಭೆಯಲ್ಲಿ ಗಲಾಟೆ ಮಾಡಿರುವವರೇ ಹಿಂದೆ ಕಾಂಗ್ರೆಸ್​ ಭವನದಲ್ಲಿ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್​ ಮೇಲೆ ಹಲ್ಲೆ ಮಾಡಿದ್ದು, ಅದರಲ್ಲು ಶಿವಕುಮಾರ್​ ಸಹ ಇದ್ದಾರೆ. ಆದರೆ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷನಾಗಿ ಶಿವಕುಮಾರ್​ನನ್ನು ಆಯ್ಕೆ ಮಾಡಿದ್ದಾರೆ. ಜಿಲ್ಲಾಧ್ಯಕ್ಷನ ಗಮನಕ್ಕೆ ತರದೆ ನೇಮಕ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.


ನಗರಸಭೆ ಸದಸ್ಯ ಅಂಬರೀಶ್​ ಪ್ರೇರಣೆಯಿಂದಲೇ ಕಾರಿನ ಚಾಲಕ ವಾಸು ಸೇರಿ ಪಕ್ಷದ ಸದಸ್ಯರಲ್ಲದವರು ಸಹ ಅತಿಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಪೈಕಿ ಶೇ.90 ಪಕ್ಷದಲ್ಲಿ ಇಲ್ಲ, ಅವರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮಕೈಗೊಳ್ಳಲಿದ್ದಾರೆ. ಈ ವಿಷಯ ಗೃಹ ಸಚಿವರ ಗಮನಕ್ಕೂ ಹೋಗಿದೆ ಎಂದರು.


ಎಂಎಲ್ಸಿ ಮುಖ್ಯ ರೂವಾರಿ
ಜಿಲ್ಲಾಧ್ಯಕ್ಷ ಎಂದರೆ ಪಕ್ಷಕ್ಕೆ ತಾಯಿ&ತಂದೆ ಸಮಾನ. ಸಹ ಕಾರ್ಯಕರ್ತರು ದೂಂಡಾವರ್ತನೆ ಮಾಡಿದ್ದಾರೆ. ಎಂಎಲ್ಸಿ ಅನಿಲ್​ ಕುಮಾರ್​ ಸರ್ಕಾರದ ಭಾಗ ಆಗಿದ್ದು, ನಾನು ಸಹ ಮತ ನೀಡಿದ್ದೇನೆ. ನನ್ನ ವಿರುದ್ಧ ಮಾತನಾಡುತ್ತಾರೆ ಎಂದರೆ ಏನರ್ಥ, ಇದಕ್ಕೆ ಮುಖ್ಯ ಪ್ರೇರಣೆ ಅನಿಲ್​ಕುಮಾರ್​ ಅವರೇ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಉಸ್ತುವಾರಿ ಜಿ.ಸಿ.ಚಂದ್ರಶೇಖರ್​ ವರದಿ ತರಿಸಿಕೊಂಡು ಇವರ ರಾಜಕೀಯ ಹಣೆ ಬರಹವನ್ನು ಬರೆಯಲಿದ್ದಾರೆ. ಶಾಸಕರು ಇಂತಹ ಟನೆಗಳು ಮುಂದುವರಿಯುತ್ತಲೇ ಇರುತ್ತವೆ ಎಂದು ಹೇಳಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net