ಜಿಲ್ಲಾ ಜಾನಪದ ಸಮ್ಮೇಳನ ಸರ್ವಾಧ್ಯಕ್ಷ ಬೇಗೂರು ಶಿವಪ್ಪಗೆ ತವರಿನಲ್ಲಿ ಆತ್ಮೀಯ ಸನ್ಮಾನ

25 ಎಸ್ಕೆಪಿ 4
ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಬೇಗೂರು ಶಿವಪ್ಪ ಅವರನ್ನು ಈಸೂರಿನಲ್ಲಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು.
Published on

ಶಿಕಾರಿಪುರ: ಸೊರಬ ತಾಲೂಕು ಆನವಟ್ಟಿಯಲ್ಲಿ ನಡೆಯಲಿರುವ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಬೇಗೂರು ಶಿವಪ್ಪ ಅವರನ್ನು ಅವರ ಹುಟ್ಟೂರಾದ ಈಸೂರಿನಲ್ಲಿ ಗ್ರಾಮಸ್ಥರು ಬುಧವಾರ ಸಿಂಗಾರಗೊಂಡ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿದರು. ಮೈಸೂರು ಪೇಟಾ ಧರಿಸಿ, ಸಾಂಪ್ರದಾಯಿಕ ಉಡುಗೆಯಲ್ಲಿ ಶಿವಪ್ಪ ಮಿರಿ ಮಿರಿ ಮಿಂಚಿದರು. ಮುಸ್ಲಿಂ ಬೀದಿ, ಕ್ಯಾಂಪ್ ಕೇರಿ, ಎ.ಕೆ.ಕಾಲನಿ, ಬಸ್ ನಿಲ್ದಾಣದ ಮೂಲಕ ಮೆರವಣಿಗೆ ರಂಗಮಂದಿರ ತಲುಪಿತು. ಅಲ್ಲಿ ಅವರನ್ನು ಸನ್ಮಾನಿಸಲಾಯಿತು.

ಶಿವಪ್ಪ ಮಾತನಾಡಿ, ನಮ್ಮೂರಿನ ಜನರ ಪ್ರೀತಿ, ಅಭಿಮಾನಕ್ಕೆ ಸದಾ ಋಣಿ. ಇಂದು ಅವರು ನೀಡಿದ ಗೌರವ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳಿಗಿಂತ ದೊಡ್ಡದು. ನನಗೆ ಜನ್ಮಕೊಟ್ಟು, ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಈ ಊರು ಮತ್ತು ಇಲ್ಲಿನ ಮಹಾಜನತೆ. ನನ್ನೂರಿನ ಜನರಿಗೆ ನನ್ನ ಮೇಲಿರುವ ಅಭಿಮಾನ ಕಂಡು ನನ್ನ ಕಂಗಳು ತುಂಬಿ ಬಂದಿವೆ ಎಂದು ಗದ್ಗದಿತರಾದರು.
ಗ್ರಾಪಂ ಅಧ್ಯಕ್ಷೆ ರೇಖಾ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಿ.ಪಾಪಯ್ಯ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಸತೀಶ್, ಶಿವಕುಮಾರ್, ಶಿವಪ್ಪಯ್ಯ, ಉಜ್ಜಳ್ಳಿ ಸುರೇಶ್, ರೇವಣಪ್ಪ, ವಿಜಯಣ್ಣ, ರವಿಕುಮಾರ್, ಅಲ್ಲಾಭಕ್ಷ್, ಮಂಜುನಾಥ್, ಬಸವರಾಜ್, ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net