ಪ್ರಾವಿಡೆಂಟ್​ನಿಂದ ವುಡ್ ಫೀಲ್ಡ್ ಪ್ರಾಜೆಕ್ಟ್ ಆರಂಭ: ಕೈಗೆಟುಕುವ ದರದಲ್ಲಿ ಐಟಿ ಕಂಪನಿಗಳಿಗೆ ಹತ್ತಿರದ ಪ್ರದೇಶದಲ್ಲಿವೆ ನಿವೇಶನ

property
Published on

ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಪ್ರಾವಿಡೆಂಟ್ ಕಂಪನಿ, ಇದೀಗ ಹೊಸದಾಗಿ ನಿವೇಶನಗಳ ಮಾರಾಟಕ್ಕೂ ಲಗ್ಗೆ ಇಟ್ಟಿದೆ. ನಿವೇಶನಗಳ ಮಾರಾಟ ಮಾಡುವ ಪ್ರಾವಿಡೆಂಟ್ ವುಡ್ ಫೀಲ್ಡ್ ಹೆಸರಿನ ಪ್ರಾಜೆಕ್ಟ್ ಅನ್ನು ಬುಧವಾರ ಬಿಡುಗಡೆ ಮಾಡಿದೆ.

ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದಲ್ಲಿ ನಿವೇಶನಗಳ ನಿರ್ಮಾಣ ಆರಂಭಿಸಿದ್ದು, 3040, 3050, 4060 ಮತ್ತು ವಾಣಿಜ್ಯ ನಿವೇಶನಗಳು ಮಾರಾಟಕ್ಕೆ ಲಭ್ಯವಿವೆ. 36.99 ಲಕ್ಷ ರೂ.ನಿಂದ ನಿವೇಶನಗಳ ಬೆಲೆ ಆರಂಭವಾಗಲಿದೆ.

ಪ್ರಾವಿಡೆಂಟ್ ಕಂಪನಿ ಅಧ್ಯಕ್ಷ ಅವಿನಾಶ್ ರಾವ್ ಮಾತನಾಡಿ, ಹಲವು ಬಾರಿ ಗ್ರಾಹಕರ ಆಪೇಕ್ಷೆ ಬದಲಾಗುವು ದರಿಂದ ನಿವೇಶನ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದೇವೆ. 45 ವರ್ಷದಿಂದ ನಾವು ರಿಯಲ್​ಎಸ್ಟೇಟ್ ಕ್ಷೇತ್ರದಲ್ಲಿದ್ದು, ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಒಂದೇ ವರ್ಷದಲ್ಲಿ 5 ಸಾವಿರ ಮನೆ ನಿರ್ಮಾಣ ಕೈಗೆತ್ತಿಕೊಂಡು 2,500 ಮನೆಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ ಎಂದರು.

ಕಂಪನಿ ಸಿಒಒ ಅಭಿಷೇಕ್ ಕಪೂರ್ ಮಾತನಾಡಿ, ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ರಸ್ತೆ ನಿರ್ವಣವಾಗಲಿದೆ. ಮೆಟ್ರೋ ಕಾಮಗಾರಿ ಸಹ ಚಾಲ್ತಿಯಲ್ಲಿದೆ. ಹೀಗಾಗಿ, ನಿವೇಶನನಕ್ಕೆ ಹೂಡಿಕೆಗೆ ಇದೊಂದು ಸುವರ್ಣಾವಕಾಶ. ಇಷ್ಟು ವರ್ಷ ನಾವು ಅಪಾರ್ಟ್ಮೆಂಟ್ ಮತ್ತು ವಿಲ್ಲಾಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದೆವು. ಇದೀಗ ಗ್ರಾಹಕರ ಬೇಡಿಕೆ ಅನುಗುಣವಾಗಿ ನಿವೇಶನ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಏನೆಲ್ಲ ವಿಶೇಷಗಳಿವೆ?: ಪ್ರಮುಖ ಐಟಿ ಕಂಪನಿಗಳಿಗೆ ಹತ್ತಿರದ ಪ್ರದೇಶವನ್ನು ಗುರುತಿಸಿ ನಿವೇಶನಗಳನ್ನು ನಿರ್ಮಾಣ ಮಾಡಲಾಗಿದೆ. ಮಕ್ಕಳ ಆಟದ ಮೈದಾನ, ಈಜುಕೊಳ, ಕ್ಲಬ್ ಹೌಸ್, ಸ್ಕೇಟಿಂಗ್ ಮೈದಾನ, ಹಿರಿಯ ನಾಗರಿಕರಿಗಾಗಿ ವಿವಿಧ ಸೌಲಭ್ಯ, ಜಿಮ್ ಒಳಗೊಂಡಿದೆ. ಪಾದಚಾರಿಗಳಿಗಾಗಿ ಪ್ರತ್ಯೇಕ ದಾರಿ ನಿರ್ಮಾಣ ಮಾಡಲಾಗಿದೆ. ತ್ಯಾಜ್ಯ ನೀರು ಸಂಸ್ಕರಣೆ, ಗಿಡಗಳಿಗೆ ನೀರು ಹಾಯಿಸುವ ವ್ಯವಸ್ಥೆ ಇದೆ. ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡಲು ಸಾವಯವ ತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗಿದೆ. ನಿವೇಶನದ ಸುತ್ತಮುತ್ತ ಅತ್ಯಾಧುನಿಕ ಎಲ್​ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಮಳೆನೀರು ಸಂಸ್ಕರಣೆಗೆ ಪ್ರತ್ಯೇಕ ಇಂಗುಗುಂಡಿ ತೆರೆಯಲಾಗಿದೆ. ಅತ್ಯಾಧುನಿಕ ಎಲೆಕ್ಟ್ರಿಕಲ್ ಕೇಬಲ್​ಗಳನ್ನು ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net