ಅಹಿಂದ ವರ್ಗದ ಹರಿಕಾರ

HLK ARASU 20
Published on

ಹೊಳಲ್ಕೆರೆ: ದೇವರಾಜ ಅರಸು ಅಹಿಂದ ವರ್ಗದ ಹರಿಕಾರ ಎಂದು ತಹಸೀಲ್ದಾರ್ ಫಾತೀಮಾಬಿ ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸಂವಿಧಾನ ಸೌಧದಲ್ಲಿ ಭಾನುವಾರ ಆಯೋಜಿಸಿದ್ದ ಅರಸು ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

ಎಲೆಕ್ಟ್ರಾನಿಕ್ ಸಿಟಿ ನಿರ್ಮಾಕ್ಕೆ ಕಾರಣಕರ್ತರಾದ ಅರಸು, ಮೈಸೂರು ರಾಜ್ಯವನ್ನು 1973 ನವೆಂಬರ್ 1ರಂದು ಕರ್ನಾಟಕ ಎಂದು ಮರು ನಾಮಕರಣ ಮಾಡಿದರು ಎಂದರು.

ಹಿಂದುಳಿದ ವರ್ಗದ ಆಯೋಗವನ್ನು ಹಾವನೂರು ನೇತೃತ್ವದಲ್ಲಿ ಸ್ಥಾಪಿಸಿ, ಅಶಕ್ತ ಜನರಿಗೆ ಶಕ್ತಿ ತುಂಬಿದರು. ಭೂ ಸುಧಾರಣೆ ಮತ್ತು ಉಳುವವನೇ ಹೊಲದೊಡೆಯ ಕಾನೂನುಗಳನ್ನು ಜಾರಿಗೊಳಿಸಿದ ಮಹಾಪುರುಷ ಎಂದು ಹೇಳಿದರು.

ಸಿದ್ದವ್ವನಹಳ್ಳಿ ವೀರೇಶ್ ಕುಮಾರ್ ಉಪನ್ಯಾಸ ನೀಡಿದರು. ತಾಪಂ ಇಒ ಎನ್.ರವಿಕುಮಾರ್, ಪಿಎಸ್‌ಐ ಸುರೇಶ್, ಪುರಸಭೆ ಮುಖ್ಯಾಧಿಕಾರಿ ಎ.ವಾಸೀಂ, ಸದಸ್ಯ ಬಿ.ಎಸ್.ರುದ್ರಪ್ಪ, ಹಿಂದುಳಿದ ಕಲ್ಯಾಣಾಧಿಕಾರಿ ಪ್ರದೀಪ್‌ಕುಮಾರ್, ಸರ್ಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎನ್.ಶಿವಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net