ಹಸುಗೆ ನೀರು ಕುಡಿಸಲು ಹೋದಾಗ ಕಾಲು ಜಾರಿ ಕೆರೆಗೆ ಬಿದ್ದು ಸಾವು

25 smg ravi naik 1
Published on

ಶಿವಮೊಗ್ಗ: ತಾಲೂಕಿನ ಬೀರನಕೆರೆ ಸಮೀಪದ ಎಂಪಿಎಂ ಕೆರೆಯಲ್ಲಿ ಭಾನುವಾರ ಹಸುವಿಗೆ ನೀರು ಕುಡಿಸಲು ಹೋದ ಯುವಕ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ.

ಬೀರನಕೆರೆಯ ರವಿನಾಯ್ಕ (18) ಮೃತ ಯುವಕ. ಮಂಜುನಾಯ್ಕ ಮತ್ತು ಗೀತಾ ಬಾಯಿ ದಂಪತಿಯ ಪುತ್ರನಾಗಿದ್ದು ಶಿವಮೊಗ್ಗ ಬಿ.ಎಚ್.ರಸ್ತೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ.

ಭಾನುವಾರ ರಜೆ ಇದ್ದುದ್ದರಿಂದ ಹಸು ಮೇಯಿಸಲು ಹೋಗಿದ್ದ. ಮಧ್ಯಾಹ್ನ ಗ್ರಾಮದ ಸಮೀಪದ ಎಂಪಿಎಂ ಕೆರೆಯಲ್ಲಿ ನೀರು ಕುಡಿಸಲು ಹೋಗಿದ್ದಾಗ ಅವಘಡ ಸಂಭವಿಸಿದೆ. ಪಾಲಕರು ಮತ್ತು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net