ಬೀರಲಿಂಗೇಶ್ವರ ದೇವಸ್ಥಾನ ಜಾತ್ರೋತ್ಸವ

25blh5 ಬೀರಲಿಂಗೇಶ್ವರ
Published on

ಬೈಲಹೊಂಗಲ: ಸಮೀಪದ ಇಂಚಲ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಮೇ 31ರಿಂದ ಜೂ 2ರ ವರೆಗೆ ಧಾರ್ಮಿಕ ಕಾರ್ಯಕ್ರಮ ಜರುಗುವುದು.

ಮೇ 31ರಂದು ಬೆಳಗ್ಗೆ 8 ಗಂಟೆಗೆ ಗ್ರಾಮದ ಶ್ರೀ ಅಂಬಾ ಪರಮೇಶ್ವರಿ ದೇವಸ್ಥಾನದಿಂದ ವಾದ್ಯ ಹಾಗೂ ಕುಂಭಮೇಳದೊಂದಿಗೆ ಶ್ರೀ ಬೀರಲಿಂಗೇಶ್ವರ ಮೂರ್ತಿ ಹಾಗೂ ಸಂಜೆ 4 ಗಂಟೆಗೆ ವಿವಿಧ ಗ್ರಾಮಗಳಿಂದ ಆಗಮಿಸುವ 11 ಪಲ್ಲಕ್ಕಿಗಳನ್ನು ಗ್ರಾಮಕ್ಕೆ ಬರಮಾಡಿಕೊಳ್ಳಗುವುದು, ರಾತ್ರಿ 9 ಗಂಟೆಗೆ ಡೊಳ್ಳಿನ ವಾಲಗ ನಡೆಯುವುದು. ಜೂ 1ರಂದು ಇಂಚಲ ಶ್ರೀ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಶ್ರೀ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸುವರು. ಲೋಕಕಲ್ಯಾರ್ಥವಾಗಿ ಹೋಮಹವನ ಕಾರ್ಯಕ್ರಮ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಗಳೊಂದಿಗೆ ಅಲಗ ಹಾಯಲಾಗುವುದು. ಸಂಜೆ 6 ಗಂಟೆಗೆ ಹಾಲುಮತ ಧರ್ಮಸಭೆ ನಡೆಯಲಿದೆ. ಡಾ. ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜೂ 3ರಂದು ಭಂಡಾರ ಒಡೆಯುವುದರ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ. ಜಾತ್ರೆ ಅಂಗವಾಗಿ ಪ್ರತಿನಿತ್ಯ ಅನ್ನ ಸಂತರ್ಪಣೆ ಜರುಗುವುದು ಎಂದು ಜಾತ್ರಾ ಕಮಿಟಿ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net