ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ

BLG 3-1
Published on

ಬೀಳಗಿ: ಉತ್ತರಪ್ರದೇಶ ಹಾಥರಸ್‌ನಲ್ಲಿ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಅಲ್ಲಿನ ಬಿಜೆಪಿ ಸರ್ಕಾರ ವಜಾಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕು ಮಾನವ ಬಂಧುತ್ವ ವೇದಿಕೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಭೀಮಪ್ಪ ಅಜೂರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಸಂಘಟನೆ ಜಿಲ್ಲಾ ಸಂಯೋಜಕ ಶ್ರೀಶೈಲ ಅಂಟಿನ ಮಾತನಾಡಿ, ಪೊಲೀಸರು ಸಾಕ್ಷಿಗಳ ನಾಶಪಡಿಸುವ ಉದ್ದೇಶದಿಂದ ಯುವತಿ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೆ ಸುಟ್ಟುಹಾಕಿದ್ದು ಸರಿಯಲ್ಲ. ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ, ಜನರಿಗೆ ಯಾವುದೇ ರೀತಿ ರಕ್ಷಣೆ ಇಲ್ಲ. ಅಲ್ಲಿ ಗುಂಡಾಗಳಿಗೆ ಮಾತ್ರ ರಕ್ಷಣೆ ಇದೆ. ಕೂಡಲೇ ಮುಖ್ಯಮಂತ್ರಿ ಯೋಗಿ ರಾಜೀನಾಮೆ ನೀಡಬೇಕು. ಮೃತಳ ಕುಟುಂಬಕ್ಕೆ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಸಂಯೋಜಕ ರವಿ ಕಾಂಬಳೆ, ಪ್ರೇಮಾ ಹಲಗಲಿ, ಪ್ರೇಮಾ ಕುಂದರಗಿ, ತಾಪಂ ಸದಸ್ಯೆ ರೇಖಾ ಹಣಮಂತ ಕಟ್ಟೆಪ್ಪನವರ, ಪ್ರೇಮಾ ನಾಯ್ಕರ, ರಮೇಶ ಜಾನಮಟ್ಟಿ, ಶಿವು ಕಾಗದಾಳ, ಶ್ರೀಶೈಲ ಜೋಗಿನ್ನವರ, ಮಂಜುಳಾ ಶಾಹಪುರ, ಅಸಲಂ ಖಲ್ೀ, ಶಿವಾನಂದ ಬಿಸನಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net