ಆಹಾರ ಧಾನ್ಯಗಳ ಕಿಟ್‌ಗಳ ವಿತರಣೆ

dvg Murugesh nirani press meet apr 11-
Published on

ಬೀಳಗಿ: ಲೌಕ್‌ಡೌನ್‌ನಿಂದ ಕೂಲಿ ಕೆಲಸ ಇಲ್ಲದೆ ಪರದಾಡುವ ಕಡು ಬಡವರು ಹಾಗೂ ಕೋವಿಡ್-19 ವಿರುದ್ಧ ಹೋರಾಡುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಕಾರ್ಮಿಕರಿಗೆ, ಪಟ್ಟಣ ಪಂಚಾಯಿತಿ ಸಿಬ್ಬಂದಿಯವರಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.

ತಹಸೀಲ್ದಾರ್ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರೊನಾ ವೈರಸ್ ತಡಗಟ್ಟಲು ಕೈಗೊಂಡ ಕ್ರಮ ಹಾಗೂ ಮುಖ್ಯ ಇಲಾಖೆ ಅಧಿಕಾರಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದೇಶದಿಂದ ಹಾಗೂ ಬೇರೆ ಬೇರೆ ಜಿಲ್ಲೆಯಿಂದ ಬಂದವರ ಮಾಹಿತಿ, ಪಡಿತರ ವಿತರಣೆ, ಕೃಷಿ ತೋಟಗಾರಿಕೆಯಲ್ಲಿ ಹಣ್ಣು ಹಂಪಲು ಬೆಳೆದ ರೈತರ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚೆ ನಡೆಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ದಯಾನಂದ ಕರೆಣ್ಣವರ ಮಾತನಾಡಿ, ವಿದೇಶದಿಂದ ಹಾಗೂ ಬೇರೆ ಬೇರೆ ರಾಜ್ಯ, ಜಿಲ್ಲೆಯಿಂದ ಬಂದವರ ಆರೋಗ್ಯ ತಪಾಸಣೆ ಮಾಡಲಾಗಿದೆ. ಇಲ್ಲಿವರೆಗೂ ಸೋಂಕಿತರು ಪತ್ತೆಯಾಗಿಲ್ಲ. ಪ್ರತಿಯೊಂದು ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ನರ್ಸ್‌ಗಳು ಮನೆಮನೆಗೆ ಹೋಗಿ ಜನರ ಆರೋಗ್ಯದ ಮಾಹಿತಿ ಪಡೆಯುತ್ತಿದ್ದಾರೆ ಎಂದರು.

ತಹಸೀಲ್ದಾರ್ ಭೀಮಪ್ಪ ಅಜೂರ ಮಾತನಾಡಿ, ಲಾಕ್‌ಡೌನ್ ಹಿನ್ನೆಲೆ ಬಂದೋಬಸ್ತ್ ಮಾಡಲಾಗಿದೆ. ಕಿರಾಣಿ ಅಂಗಡಿ ಮತ್ತು ಕಾಯಿಪಲ್ಲೆ ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ. ಪಟ್ಟಣದಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವರಿಕೆ ಮಾಡಲಾಗಿದೆ. ಬೆಳೆ ಹಾನಿಯಾದ ಬಗ್ಗೆ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಕಳಿಸಲಾಗುವುದು ಎಂದರು.

ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛೆತೆಗೆ ಆದ್ಯತೆ ನೀಡಿ ಕೀಟನಾಶಕ ರಾಸಾಯನಿಕ ಸಿಂಪಪಡಿಸಲಾಗಿದೆ. ಸ್ಲಂ ಏರಿಯಾದಲ್ಲಿ ಉಚಿತವಾಗಿ ಹಾಲು ವಿತರಿಸಲಾಗಿದೆ ಎಂದರು. ಸಿಪಿಐ ಸಂಜೀವ ಬಳಿಗಾರ ಮಾಹಿತಿ ನೀಡಿ, ಲಾಕ್‌ಡೌನ್ ಹಿನ್ನೆಲೆ ಅನವಶ್ಯಕವಾಗಿ ಹೊರಗಡೆ ತಿರಗಾಡುವವರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದರು. ತಾಪಂ ಇಒ ಎಂ.ಕೆ. ತೋದಲಬಾಗಿ, ಡಾ.ಸಂಜಯ ಯಡಹಳ್ಳಿ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net