ಬೈಕ್ ಅಪಘಾತದಲ್ಲಿ ಯುವಕ ಸಾವು

19102020 Kudligi Accident
Published on

ಬೀಳಗಿ: ತಾಲೂಕಿನ ತೆಗ್ಗಿ ಗ್ರಾಮದ ಹತ್ತಿರ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಭಾನುವಾರ ಸಂಜೆ 6.45 ಗಂಟೆಗೆ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬೈಕ್ ಸವಾರ ಸಾವನಪ್ಪಿದ್ದಾನೆ.

ಮುಧೋಳ ತಾಲೂಕಿನ ಸೋರಗಾಂವಿ ಗ್ರಾಮದ ಉಮೇಶಕುಮಾರ ಶಂಕರ ಅರಕೇರಿ (28) ಮೃತ ಯುವಕ. ಈತನು ಬೀಳಗಿ ಕಡೆಯಿಂದ ಮುಧೋಳ ಮಾರ್ಗವಾಗಿ ಸೋರಗಾಂವಿಗೆ ಹೋಗುತ್ತಿದ್ದನು. ಇತನ ಜತೆ ಬೈಕ್‌ನ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಮದ ಬಂದೇನಮಾಜ್ ಇಮಾಮಸಾಬ ಚೋಪದಾರ ಎಂಬುವವನ ಎಡಗಾಲು ಮತ್ತು ಮುಖಕ್ಕೆ ತೀವ್ರವಾದ ಪಟ್ಟಾಗಿದ್ದು, ಚಿಕಿತ್ಸೆಗಾಗಿ ಜಮಖಂಡಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಪಿಐ ಎಸ್.ಎಸ್. ಬಳೆಗಾರ ಹಾಗೂ ಪಿಎಸ್‌ಐ ಕೆ.ಟಿ. ಮಾನೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net