

ಬೀಳಗಿ: ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಪಟ್ಟಣದಲ್ಲಿ ಶನಿವಾರ ಸಡಗರ ಸಂಭ್ರಮದಿಂದ ಜರುಗಿತು.
ಪಟ್ಟಣದ ರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ಅಷ್ಟೋತ್ತರ ನಾಮಾವಳಿ, ರಥಾಂಗ ಹೋಮ, ಪಾಲಕಿ ಸೇವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ವಿವಿಧ ಲ-ಪುಷ್ಪಗಳಿಂದ ಅಲಂಕೃತಗೊಂಡ ರಥೋತ್ಸವ ಜರುಗಿತು.
ರಾಜೇಂದ್ರ ಶಾಮರಾವ್ ದೇಶಪಾಂಡೆ ಹಾಗೂ ಸಹೋದರರಿಂದ ಮಹಾಪ್ರಸಾದ ವಿತರಿಸಲಾಯಿತು. ನಾಗರಾಳ ಗ್ರಾಪಂ ಸದಸ್ಯರಾದ ಅನಿಲ ಗುಡೂರ, ಲಕ್ಷ್ಮೀಕಾಂತ ಸೊನ್ನ, ಕೆ.ಎಸ್.ಪಡಗಾನೂರ, ಅಶೋಕ ಜೋಶಿ, ಆರ್.ಎಚ್.ಕುಲಕರ್ಣಿ, ಎಚ್.ಎಸ್. ಸೊನ್ನ, ಅರವಿಂದ ಕಾರಜೋಳ, ಅನೀಲ ಗುಡೂರ, ರಮೇಶ ಮುತಾಲಿಕ್‌ದೇಸಾಯಿ, ಗೋವಿಂದ ಪಂತರ, ಮುತ್ತು ದೇಶಪಾಂಡೆ, ಆನಂದ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ, ಸುರೇಶ ದೇಶಪಾಂಡೆ, ಗುರು ದೇಶಪಾಂಡೆ ಇತರರಿದ್ದರು.