ಅಕ್ರಮ ಗೋಮಾಂಸ ಸಾಗಾಟ ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದ ನಾಗರಿಕರು

IMG-20230910-WA0005
Published on

ಮಂಗಳೂರು; ನಗರದ ಉರ್ವಸ್ಟೋರ್ ಬಳಿ ಭಾನುವಾರ ಅಕ್ರಮ ಗೋಮಾಂಸ ಸಾಗಾಟ ವಾಹನವನ್ನು ಹಿಂದೂ ಸಂಘಟನೆ ಕಾರ್ಯಕರ್ತಕರು ತಡೆನಿಲ್ಲಿಸಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಜೋಕಟ್ಟೆಯಿಂದ ನಗರದ ಮಾಂಸದ ಅಂಗಡಿಗಳಿಗೆ ವಾಹನದಲ್ಲಿ ಗೋಮಾಂಸ ಪೂರೈಕೆಯಾಗುತ್ತಿತ್ತು ಎಂದು ಹೇಳಲಾಗಿದೆ. ಸುಮಾರು 2.5 ಕ್ವಿಂಟಾಲ್ ಗೋಮಾಂಸವನ್ನು ವಾಹನದಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಚಾಲಕ ಸಮೇತ ವಾಹನವನ್ನು ಉರ್ವ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಕಳೆದ 2 ತಿಂಗಳಿಂದ ಈ ರೀತಿ ಬೀಫ್ ಸ್ಟಾಲ್‌ಗಳಿಗೆ ಗೋಮಾಂಸ ಪೂರೈಸುತ್ತಿದ್ದುದಾಗಿ ವಾಹನದ ಚಾಲಕ ಪೊಲೀಸರಲ್ಲಿ ತಿಳಿಸಿದ್ದಾನೆ ಎಂದು ಮೂಲ ತಿಳಿಸಿದೆ. ಪೊಲೀಸರು ಕೇಸು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net