ಗೋಮಾಂಸ ಮಾರುತ್ತಿದ್ದ ಇಬ್ಬರ ಬಂಧನ

Arrest Kaidhi
Published on

ಖಾನಾಪುರ: ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಗೂಡ್ಸ್ ವಾಹನದಲ್ಲಿ ಗೋಮಾಂಸ ಶೇಖರಿಸಿ ಬೀದಿ-ಬೀದಿಗಳಲ್ಲಿ ಸಂಚರಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ನಂದಗಡ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಗಂದಿಗವಾಡ ಗ್ರಾಮದ ಇಸ್ಮಾಯಿಲ್ ಬೇಪಾರಿ ಮತ್ತು ಸಲ್ಮಾನ್ ಬೇಪಾರಿ ಬಂಧಿತರು. ಲಾಕ್‌ಡೌನ್ ಸಂದರ್ಭದಲ್ಲಿ ರಾಜಾರೋಷವಾಗಿ ವಾಹನದಲ್ಲಿ ಗೋಮಾಂಸ ತುಂಬಿ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ಗೋಮಾಂಸ ಸಾಗಿಸಲು ಬಳಸಿದ ಗೂಡ್ಸ್ ವಾಹನ ಮತ್ತು 15 ಕೆ.ಜಿ.ಯಷ್ಟು ಮಾಂಸ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net