ಚಿಕನ್ ಸೆಂಟರ್‌ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರ ಬಂಧನ

crime arrested
Published on

ಗುರುಪುರ: ಗಂಜಿಮಠ ಸಮೀಪದ ಸೂರಲ್ಪಾಡಿ ಮಾಂಸದಂಗಡಿಯೊಂದಕ್ಕೆ ದಾಳಿ ಮಾಡಿದ ಬಜ್ಪೆ ಪೊಲೀಸರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ದನದ ಮಾಂಸ ಸಹಿತ ಆರೋಪಿಗಳಿಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸೂರಲ್ಪಾಡಿಯ ‘ಸಲ್ಮಾ ಚಿಕನ್ ಸೆಂಟರ್’ನಲ್ಲಿ ದನದ ಮಾಂಸ ಮಾರಾಟ ಮಾಡಲಾಗುತ್ತದೆ ಎಂಬ ಖಚಿತ ಮಾಹಿತಿ ಮೇರೆಗೆ ಬಜ್ಪೆ ಪೊಲೀಸರು ದಾಳಿ ಮಾಡಿ 23 ಕೆ.ಜಿ ದನದ ಮಾಂಸ ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸ್ಥಳೀಯ ನಿವಾಸಿಗಳಾದ ಮೊಹಮ್ಮದ್ ಸಮೀರ್ ಮತ್ತು ಮೊಹಮ್ಮದ್ ಸಫೀಕ್ ಎಂಬುವರನ್ನು ಬಂಧಿಸಲಾಗಿದೆ. ಜತೆಗೆ ಮಾಂಸ ಮಾರಾಟಕ್ಕೆ ಬಳಸಲಾದ ಓಮ್ನಿ ಕಾರನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳ ಜತೆಗಾರರಾದ ಫಾರೂಖ್ ಮತ್ತು ಮುಸ್ತಾಖ್ ಅಹ್ಮದ್ ಸಾದ್ ಪರಾರಿಯಾಗಿದ್ದಾರೆ. ತಲೆಮರೆಸಿಕೊಂಡ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಅಂಗಡಿಯಲ್ಲಿ ಹಿಂದೆಯೂ ಅಕ್ರಮವಾಗಿ ದನದ ಮಾಂಸ ಮಾರಾಟ ನಡೆದಿದ್ದು, ಪ್ರಕರಣ ದಾಖಲಾಗಿತ್ತು ಎಂದು ಬಜ್ಪೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net