ಬೀಡಿ ಕಾರ್ಮಿಕರ ಕನಿಷ್ಠ ವೇತನ ಕಡಿತಕ್ಕೆ ಆಕ್ರೋಶ

udp-15-citu
Published on

ಉಡುಪಿ: ರಾಜ್ಯ ಸರ್ಕಾರ 1 ಸಾವಿರ ಬೀಡಿಗೆ 331 ರೂ. ಇದ್ದ ಕನಿಷ್ಠ ವೇತನವನ್ನು 270 ರೂ.ಗೆ ಇಳಿಕೆ ಮಾಡಿದ್ದು, ಕೂಡಲೇ ಈ ಅದೇಶ ಹಿಂಪಡೆದು ಕನಿಷ್ಠ 395 ರೂ. ನಿಗದಿ ಮಾಡಬೇಕು ಎಂದು ಬೀಡಿ ಎಂಡ್​ ಟೋಬ್ಯಾಕೋ ಲೇಬರ್​ ಯೂನಿಯನ್​  ಅಧ್ಯಕ್ಷೆ ನಳಿನಿ ಎಸ್​. ಆಗ್ರಹಿಸಿದರು.

ಬೀಡಿ ಕಾರ್ಮಿಕ ಕನಿಷ್ಠ ವೇತನ ಹಾಗೂ ತುಟ್ಟಿಭತ್ಯೆ ಕಡಿತಗೊಳಿಸಿದ ಸರ್ಕಾರದ ಆದೇಶ ವಾಪಾಸ್ಸಾತಿಗೆ ಒತ್ತಾಯಿಸಿ ಬೀಡಿ ಎಂಡ್​ ಟ್ಯೋಬ್ಯಾಕೋ ಲೇಬರ್​ ಯೂನಿಯನ್​ ನೇತೃತ್ವದಲ್ಲಿ ತಹಶಿಲ್ದಾರರ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಗ್ರಾ$ಜುವಿಟಿ ಹಣ ನೀಡದೆ ವಂಚಿಸುತ್ತಿರುವ ಬೀಡಿ ಕಂಪೆನಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕು. ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಆರೋಗ್ಯ ಸಹಾಯಧನ, ವಿದ್ಯಾರ್ಥಿ ವೇತನ, ಮನೆ ನಿರ್ಮಾಣಕ್ಕೆ ಧನ ಸಹಾಯ ನಿರಂತರ ಒದಗಿಸಬೇಕು. ಕಳೆದ 7 ವರ್ಷಗಳಿಂದ ಬಾಕಿ ಇರುವ ಡಿಎ ಮತ್ತು ವೇತನಗಳನ್ನು ಮಾಲೀಕರಿಂದ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಉಮೇಶ್​ ಕುಂದರ್​, ಅಖಿಲ ಭಾರತ ಬೀಡಿ ಫೆಡರೇಶನ್​ ಯೂನಿಯನ್​ ಕೇಂದ್ರ ಸಮಿತಿ(ದೆಹಲಿ) ಸದಸ್ಯರಾದ ಕವಿರಾಜ್​ ಎಸ್​.ಕಾಂಚನ್​ , ಸಿಐಟಿಯು ಉಡುಪಿ ಜಿಲ್ಲಾ ಕೋಶಾಧಿಕಾರಿ ಶಶಿಧರ ಗೋಲ್ಲ, ಸಮಿತಿ ಸದಸ್ಯರಾದ ಗಿರಿಜಾ, ವಸಂತಿ, ಶಾರದಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net