ಹೆಜ್ಜೇನು ದಾಳಿಯಿಂದ ಶಾಲಾ ಸಿಬ್ಬಂದಿಗೆ ಗಾಯ

2222 skpp 4
Published on

ಸಕಲೇಶಪುರ; ಪಟ್ಟಣದ ರೋಟರಿ ಶಾಲೆಯ 9 ಸಿಬ್ಬಂದಿ ಹೆಜ್ಜೇನು ದಾಳಿಯಿಂದ ಗಾಯಗೊಂಡಿದ್ದಾರೆ. ಶುಕ್ರವಾರ ಶಾಲೆ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ಶಾಲಾ ಕಟ್ಟಡದಲ್ಲಿ ಗೂಡು ಕಟ್ಟಿರುವ ಹೆಜ್ಜೇನು ದಾಳಿ ನಡೆಸಿದವು. ಈ ಸಂದರ್ಭ ಬೋಧಕ ಮತ್ತು ಬೋಧಕೇತರ ಶಾಲಾ ಸಿಬ್ಬಂದಿಗಳಾದ ಭಾಸ್ಕರ, ಕೋಮಲಾ, ಸೋಮಶೇಖರ್, ರವಿ, ಚೈತನ್ಯ, ಸಂಜಯ್, ಅಕ್ಷಯ್, ವಿಶ್ವನಾಥ್ ಹಾಗೂ ವರ್ಗಿಸ್ ಎಂಬುವವರು ಗಾಯಗೊಂಡಿದ್ದಾರೆ.ಇವರೆಲ್ಲರೂ ಸುಮಾರು ಅರ್ಧ ಕಿ.ಮೀ. ಓಡಿ ಹೋದರೂ ಹೆಜ್ಜೇನುಗಳು ಹಿಂಡಾಗಿ ದಾಳಿ ನಡೆಸಿ ಗಾಯ ಗೊಳಿಸಡಿವೆ. ಎಲ್ಲರೂ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೋಮಲಾ ಎಂಬುವವರು ಹೆಚ್ಚು ಅಸ್ವಸ್ಥಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net