ತುಂಬಿ ಹರಿಯುತ್ತಿದೆ ಬೇಡ್ತಿ ನದಿ

23 ylp 01 - bedti river flow
Published on

ಯಲ್ಲಾಪುರ: ತಾಲೂಕಿನಾದ್ಯಂತ ಗಾಳಿ-ಮಳೆ ಮುಂದುವರಿದಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಭಾನುವಾರವೂ ಮಳೆಯ ಆರ್ಭಟ ಮುಂದುವರಿದಿತ್ತು. ಜೋರಾದ ಮಳೆಯಿಂದಾಗಿ ಬೇಡ್ತಿ ನದಿ ತುಂಬಿ ಹರಿಯುತ್ತಿದೆ.
ಮಾಗೋಡ ರಸ್ತೆಯಲ್ಲಿ ಕಾಳಿಮನೆ ಕ್ರಾಸ್ ಬಳಿ 2-3 ಅಡಿ ನೀರು ನಿಂತಿದ್ದು, ವಾಹನ ಸವಾರರು ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಓಡಾಡುವುದೇ ಕಷ್ಟವಾಗಿದೆ.
ಭಾನುವಾರ ವಾರದ ಸಂತೆ ಬೈಲ್ ರಸ್ತೆಯುದ್ದಕ್ಕೂ ನಡೆಯುತ್ತಿದ್ದು, ಮಳೆ ಸಂತೆಯ ವಹಿವಾಟಿಗೆ ಅಡ್ಡಿಯಾಯಿತು. ತರಕಾರಿಗಳ ದುಬಾರಿ ಧಾರಣೆ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಅದರೊಂದಿಗೆ ಮಳೆಯ ನಡುವೆಯೇ ತರಕಾರಿ ವ್ಯಾಪಾರ ನಡೆದಿದ್ದು, ರಸ್ತೆಯ ಪಕ್ಕದ ಗಟಾರ್ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದು ಜನರ ಓಡಾಕ್ಕೂ ವ್ಯಾಪಾರ ವಹಿವಾಟಿಗೂ ತೊಂದರೆಯಾಯಿತು.
ವಿಶೇಷವಾಗಿ ತರಕಾರಿ ವ್ಯಾಪಾರಸ್ಥರಿಗೆ ಮಳೆ ನೀರಿನಲ್ಲಿ ತರಕಾರಿ ಕೊಚ್ಚಿ ಹೋಗದಂತೆ ನಿಗಾ ವಹಿಸುವುದೇ ದೊಡ್ಡ ಸಾಹಸವಾಯಿತು. ನಿಂತುಕೊಂಡೇ ತರಕಾರಿ ಮಾರಾಟ ಮಾಡಬೇಕಾದ ಸ್ಥಿತಿ ಉಂಟಾಯಿತು. ಮಳೆಯ ಅಬ್ಬರ ಪರ ಊರಿನಿಂದ ಬರುವ ವ್ಯಾಪಾರಸ್ಥರು ಮಳೆ-ಚರಂಡಿ ನೀರಿನ ಕಿರಿಕಿರಿ ಬಗ್ಗೆ ಶಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net