ಬೇಡ ಜಂಗಮ ಸಮಾಜಕ್ಕೆಸೌಲಭ್ಯ ಕಲ್ಪಿಸಲು ಬದ್ಧ

beda jangama
Published on

ಬ್ಯಾಡಗಿ: ಬೇಡ ಜಂಗಮ ಸಮಾಜದ ಸಾಂವಿಧಾನಿಕ ಹಕ್ಕು ಪಡೆಯಲು ನಡೆಸುತ್ತಿರುವ ಹೋರಾಟ ನ್ಯಾಯಬದ್ಧವಾಗಿದೆ. ಸರ್ಕಾರದ ಮಟ್ಟದಲ್ಲಿ ದೊರೆಯುವ ಎಲ್ಲ ಸೌಲಭ್ಯ ಕಲ್ಪಿಸಲು ಬದ್ಧ ಎಂದು ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.

ತಾಲೂಕಿನ ಗುಡ್ಡದಮಲ್ಲಾಪುರ ಶ್ರೀ ಮೂಕಪ್ಪಸ್ವಾಮಿಗಳ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಬೇಡಜಂಗಮ ಸಮಾವೇಶ ಹಾಗೂ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಕಾಲಿಗೆ ಜಂಗಮ ಕಟ್ಟಿಕೊಂಡು ಸನಾತನ ಕಾಲದಿಂದಲೂ ಧಾರ್ಮಿಕ ಭಿಕ್ಷಾಟನೆ ಮಾಡುತ್ತಿರುವ ಬೇಡ ಜಂಗಮ ಸಮಾಜದವರು ಸಂವಿಧಾನದಲ್ಲಿ ನೀಡಿರುವ ಹಕ್ಕು ಕೇಳುತ್ತಿದ್ದಾರೆ. ಸಮಾಜದ ಅಭಿವೃದ್ಧಿಗೆ ಭೂಮಿ ಮಂಜೂರಾತಿ ಮತ್ತಿತರ ಬೇಡಿಕೆ ಈಡೇರಿಸುವೆ. ಈ ಕುರಿತು ಹಕ್ಕಿನ ಬೇಡಿಕೆ ಸರ್ಕಾರದ ಗಮನಕ್ಕೆ ತರುವೆ ಎಂದರು.

ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ, ತಾಲೂಕಿನ ಪುಣ್ಯಕ್ಷೇತ್ರಗಳಲ್ಲಿ ಗುಡ್ಡದಮಲ್ಲಾಪುರ ಮಠ ಮಹತ್ವ ಪಡೆದಿದೆ. ಎಲ್ಲ ಧರ್ಮೀಯರು ಇಲ್ಲಿಗೆ ಬರುತ್ತಿದ್ದಾರೆ. ಮಠ, ಮಂದಿರಗಳಿಗೆ ದಾನ-ಧರ್ಮ ಮಾಡಿದಲ್ಲಿ ಅಭಿವೃದ್ಧಿಯಾಗಲಿವೆ. ಹುಟ್ಟು ಸಾವಿನ ಎಲ್ಲ ಕಾರ್ಯಗಳಲ್ಲೂ ಜಂಗಮರು ಬೇಕು. ಬ್ಯಾಡಗಿ ಕುಮಾರೇಶ್ವರ ಪಾಠಶಾಲೆಯ ಜಂಗಮ ವಟುಗಳು ನಾಡಿನೆಲ್ಲೆಡೆ ಶ್ರೀಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಬೇಡ ಜಂಗಮ ಸಮಾಜದ ಅಧ್ಯಕ್ಷ ಶಂಭಯ್ಯ ಮುದೇನೂರಮಠ ಪ್ರಾಸ್ತಾವಕವಾಗಿ ಮಾತನಾಡಿ, 10 ಎಕರೆ ಜಮೀನನ್ನು ಸರ್ಕಾರ ಮಂಜೂರಾತಿ ನೀಡಬೇಕು. ಆ ಜಾಗದಲ್ಲಿ ಗೋಶಾಲೆ, ವೃದ್ಧಾಶ್ರಮ, ಅಂಧರ ಶಾಲೆ ಆರಂಭಿಸಲಾಗುವುದು. ಸರ್ಕಾರ ಬೇಡ ಜಂಗಮ ಸಮಾಜಕ್ಕೆ ವಿವಿಧ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು.

ಷ.ಬ್ರ. ಶ್ರೀಮೂಕಪ್ಪಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಉಪನ್ಯಾಸಕ ಡಾ. ನಾಗಭೂಷಣಸ್ವಾಮಿ ಎನ್.ಎಂ. ವಹಿಸಿದ್ದರು.
ಇದಕ್ಕೂ ಮುನ್ನ ಕುಂಭೋತ್ಸವ, ರೇಣುಕಾಚಾರ್ಯ ಹಾಗೂ ಮೂಕಪ್ಪಸ್ವಾಮಿಗಳು ಮೆರವಣಿಗೆ ನಡೆಯಿತು.

ಧರ್ಮಾಧಿಕಾರಿ ಹುಚ್ಚಯ್ಯಸ್ವಾಮಿ ದಾಸೋಹಮಠ , ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಕೆಸಿಸಿ ಸದಸ್ಯ ಚನ್ನಬಸಪ್ಪ ಹುಲ್ಲತ್ತಿ, ವೀ.ವೀ. ಹಿರೇಮಠ, ದಾನಪ್ಪ ಚೂರಿ, ಮುರಿಗೆಪ್ಪ ಶೆಟ್ಟರ, ಪುರಸಭೆ ಸದಸ್ಯೆ ಕವಿತಾ ಸೊಪ್ಪಿನಮಠ, ಗ್ರಾಪಂ ಅಧ್ಯಕ್ಷ ವೀರಯ್ಯ ಹಿರೇಮಠ, ವೀರಯ್ಯ ಹನಗೋಡಿಮಠ, ಎಂ.ಎಚ್. ಬೇತೂರಮಠ, ಕೆ.ಸಿ. ಸೊಪ್ಪಿನಮಠ, ವೀರಯ್ಯ ಚಿಲ್ಲೂರಮಠ, ಕುಮಾರಸ್ವಾಮಿ ಹಿರೇಮಠ, ಜಗದೀಶ್ವರಯ್ಯ ಮಠದ, ಚನ್ನಬಸಯ್ಯ ಪ್ಯಾಟಿಮಠ, ಗಂಗಾಧರ ಪ್ಯಾಟಿಮಠ, ಮಂಗಳ ಕೆಂಡದಮಠ, ಎ.ಕೆ. ಅಡವಾನಿಮಠ, ರವೀಂದ್ರ ಬೇತೂರಮಠ. ಮಂಜಯ್ಯ ಹಿರೇಮಠ ಇತರರಿದ್ದರು. ಶಿಕ್ಷಕಿ ಅನ್ನಪೂರ್ಣ ಬೇತೂರಮಠ, ಹುಚ್ಚಯ್ಯ ಹಮ್ಮಗಿ ಕಾರ್ಯಕ್ರಮ ನಿರ್ವಹಿಸಿದರು.
ಫೋಟೋ1ಬಿವೈಡಿ1
ಬ್ಯಾಡಗಿ ತಾಲೂಕು ಗುಡ್ಡದಮಲ್ಲಾಪುರದಲ್ಲಿ ಭಾನುವಾರ ಏರ್ಪಡಿಸಿದ್ದ ಬೇಡ ಜಂಗಮ ಸಮಾಜದ ಸಮಾವೇಶವನ್ನು ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸಿದರು. ಹುಚ್ಚಯ್ಯಸ್ವಾಮಿ ದಾಸೋಹಮಠ, ಚನ್ನಬಸಪ್ಪ ಹುಲ್ಲತ್ತಿ, ಕವಿತಾ ಸೊಪ್ಪಿನಮಠ, ವೀರಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net