

ದೇವದುರ್ಗ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರ್ಥಿಕ ಸಬಲೀಕರಣದ ಜತೆಗೆ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ರಾಜೇಶ ಎಂ.ಕಾನರ್ಪ ಹೇಳಿದರು.
ತಾಲೂಕಿನ ಜಾಲಹಳ್ಳಿಯ ಶ್ರೀ ಲಕ್ಷ್ಮಿರಂಗನಾಥ ಕಲ್ಯಾಣ ಮಂಟಪದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಆಯೋಜಸಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಯೋಜನೆಯಿಂದ ಹಲವು ಜನಪರ ಕಾರ್ಯಕ್ರಮ ರೂಪಿಸಿ ಅನುಷ್ಠಾನ ಮಾಡಲಾಗಿದೆ. ಮಹಿಳೆಯರಿಗೆ ಸ್ವಸಹಾಯ, ಆರೋಗ್ಯ ತಪಾಸಣೆ, ಮದ್ಯವರ್ಜನೆ ಶಿಬಿರ, ಸರ್ಕಾರಿ ಶಾಲೆಗಳಿಗೆ ಸಲಕರಣೆ ವಿತರಣೆ, ಬಡವರಿಗೆ ಸೂರು ಸೇರಿ ಹತ್ತಾರು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜನಪರ ಕೆಲಸ ಮಾಡುವ ದೃಷ್ಟಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಶ್ರೀಗಳು ರೂಪಿಸಿದ್ದಾರೆ. ಜನರು ಯೋಜನೆ ಲಾಭ ಪಡೆಯುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶರಣು ಹುಣಸಗಿ, ವೆಂಕೋಬ, ಅಕ್ಕಮಹಾದೇವಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಗುರುಲಿಂಗಮ್ಮ, ಮೇಲ್ವಿಚಾರಕ ಶಿವರಾಜ್ ಇತರರಿದ್ದರು.