ಬ್ಯೂಟಿಷಿಯನ್ನರ ಸಂಸ್ಥೆ ಸದಸ್ಯತ್ವ ಪಡೆಯಿರಿ

maxresdefault
Published on

ನಗರದಲ್ಲಿ ಬ್ಯೂಟಿಷಿಯನ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಕ್ಷೇತ್ರದಲ್ಲಿನ ಇತ್ತೀಚಿನ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆ, ತಂತ್ರಜ್ಞಾನವನ್ನು ತರಬೇತಿ ಮೂಲಕ ಕಲಿಸುವ ಕೆಲಸವನ್ನು ಮೈಸೂರು ಹೇರ್ ಆ್ಯಂಡ್ ಬ್ಯೂಟಿಷಿಯನ್ನರ ಸಂಸ್ಥೆ ಮಾಡುತ್ತಿದೆ. ಹೀಗಾಗಿ ಬ್ಯೂಟಿಷಿಯನ್‌ಗಳು ಸಂಸ್ಥೆಯ ಸದಸ್ಯತ್ವ ಪಡೆಯಬೇಕು ಎಂದು ಸಂಸ್ಥೆಯ ಅಧ್ಯಕ್ಷೆ ಉಮಾ ಜಾಧವ್ ತಿಳಿಸಿದರು.

ಈ ನಿಟ್ಟಿನಲ್ಲಿ ರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷೆ ಹಾಗೂ ಅಂತಾರಾಷ್ಟ್ರೀಯ ತೀರ್ಪುಗಾರರಾದ ಡಾ.ಸಂಗೀತಾ ಚೌವ್ಹಾಣ್ ಅವರು ನಗರಕ್ಕೆ ಭೇಟಿ ನೀಡಿ, ವಿಚಾರಸಂಕಿರಣ ನಡೆಸಿಕೊಟ್ಟಿದ್ದಾರೆ. ಬ್ಯೂಟಿಷಿಯನ್ನರಿಗೆ ಸರ್ಕಾರದ ನೆರವು ದೊರೆಯಬೇಕಾಗಿದೆ. ನಗರದಲ್ಲಿ ಸುಮಾರು 190 ಜನರು ಸದಸ್ಯರಾಗಿದ್ದಾರೆ. ಇತರರು ಸಹ ಸದಸ್ಯರಾದಲ್ಲಿ ಅನೇಕ ಪ್ರಯೋಜನ ಪಡೆಯಬಹುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪದಾಧಿಕಾರಿಗಳಾದ ಡಾ.ಸಂಗೀತಾ ಚೌವ್ಹಾಣ್, ಡಿ.ಜ್ಯೋತಿ, ಕೃಪಾ, ನಂದಿನಿ, ಗಾಯತ್ರಿ, ಸರೋಜಾ, ಸಂಜನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net