ಸಂವಿಧಾನದಿಂದಾಗಿ ಶೋಷಿತರು ಮುಖ್ಯವಾಹಿನಿಗೆ

1 MDG 1
Published on

ಮುಂಡರಗಿ: ಶೋಷಿತರ ಸ್ವಾಭಿಮಾನದ ಹೋರಾಟವೇ ಭೀಮಾ ಕೋರೆಗಾಂವ್ ಯುದ್ಧ. 500 ಮಹರ್ ಸೈನಿಕರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ 28 ಸಾವಿರ ಸೈನಿಕರಿದ್ದ ಪೇಶ್ವೆಗಳ ವಿರುದ್ಧ ವೀರತನದಿಂದ ಹೋರಾಡಿ ಜಯಶಾಲಿಯಾದರು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್. ಬಳ್ಳಾರಿ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್​ನಲ್ಲಿ ಅಂಬೇಡ್ಕರ್ ಅಭಿಮಾನಿ ಬಳಗ ಹಾಗೂ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

ಮಹರ್ ಸೈನಿಕರು ವೀರತನದಿಂದ ಹೋರಾಡಿ ಜಯಸಾಧಿಸಿದ್ದನ್ನು ಮನುವಾದಿಗಳು ಮುಚ್ಚಿಹಾಕಿದ್ದರು. ಡಾ.ಅಂಬೇಡ್ಕರ್ ಅವರು ಅದರ ಬಗ್ಗೆ ತಿಳಿದು ಬೆಳಕಿಗೆ ತಂದರು. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದರಿಂದ ಶೋಷಿತ ವರ್ಗದ ದಲಿತರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಡಾ.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಷಾ ಹೇಳಿಕೆ ತೀವ್ರ ಖಂಡನೀಯ ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಹಿಂದೆ ಅಸ್ಪೃಶ್ಯರನ್ನು ಹೀನಾಯವಾಗಿ ಕಾಣಲಾಗುತ್ತಿತ್ತು. ಅವರ ಬದುಕು ಚಿಂತಾಜನಕವಾಗಿತ್ತು. ಅವರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದರು.

ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ಡಿಎಸ್​ಎಸ್ ಜಿಲ್ಲಾ ಸಂಚಾಲಕ ದುರುಗಪ್ಪ ಹರಿಜನ, ಅಂಬೇಡ್ಕರ್ ಅಭಿಮಾನಿ ಬಳಗದ ಅಧ್ಯಕ್ಷ ನಿಂಗರಾಜ ಹಾಲಿನವರ, ಡಿಎಸ್​ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಸತೀಶ ಹುಲಿ ಮಾತನಾಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಾಗೂ ಕೋರೆಗಾಂವ್ ವಿಜಯ ಸ್ತಂಭ ಮೆರವಣಿಗೆ ಮಾಡಲಾಯಿತು

ತಾಲೂಕು ಡಿಎಸ್​ಎಸ್ ಸಂಚಾಲಕ ಸೋಮಣ್ಣ ಹೈತಾಪುರ, ಚಂದ್ರಶೇಖರ ಪೂಜಾರ, ಮಹೇಶ ಹಾಲಿನವರ, ಪ್ರವೀಣ ವಡ್ಡಟ್ಟಿ, ನಿಂಗಪ್ಪ ಮೇಗಲಮನಿ, ಸುರೇಶ ಮಾಯಮ್ಮನವರ, ಸಂತೋಷ ಹಡಗಲಿ, ರವಿ ದೊಡ್ಡಮನಿ, ಮಂಜುನಾಥ ಕಟ್ಟಿಮನಿ, ಮಂಜುನಾಥ ಹೈತಾಪುರ, ರವಿ ಬಂಡಿವಡ್ಡರ, ಮಂಜು ಹರಿಜನ, ಈರಣ್ಣ ಹಾಲಿನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net