ಬ್ಯೂಟಿ ಪಾರ್ಲರ್​ ತರಬೇತಿ ಶಿಬಿರಕ್ಕೆ ಚಾಲನೆ

28 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೇಂದ್ರ ಕಾರಾಗೃಹ, ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ, ಎಮ್ಮಿಕೇರಿಯ ಎಂಜಲ್​ ಬ್ಯೂಟಿ ಸಲೂನ್​ ಮತ್ತು ಅಕಾಡೆಮಿ ಆಶ್ರಯದಲ್ಲಿ ನಗರದ ಕೇಂದ್ರ ಕಾರಾಗೃಹದ ಮಹಿಳಾ ಬಂಧಿಗಳಿಗೆ 3 ತಿಂಗಳ ಕಾಲ ಆಯೋಜಿಸಿರುವ ಬ್ಯೂಟಿ ಪಾರ್ಲರ್​ ತರಬೇತಿ ಶಿಬಿರಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜರೀನಾ ಶಿಬಿರ ಉದ್ಘಾಟಿಸಿ ಮಾತನಾಡಿ, ಕೇಂದ್ರ ಕಾರಾಗೃಹದಲ್ಲಿನ ಮಹಿಳಾ ಬಂಧಿಗಳಿಗೆ ಬ್ಯೂಟಿ ಪಾರ್ಲರ್​ ತರಬೇತಿ ಆಯೋಜಿಸಿದ್ದು ಶ್ಲಾಘನೀಯ. ಮಹಿಳಾ ಬಂಧಿಗಳು ತರಬೇತಿ ಕಾರ್ಯಾಗಾರದ ಪ್ರಯೋಜನ ಪಡೆಯಬೇಕು ಎಂದರು.

ಹಿರಿಯ ಸಿವಿಲ್​ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ. ಮಹದೇವ ನಾಯ್ಕ, ಉಪ ಅಧೀಕ್ಷಕಿ ನಿರ್ಮಲಾ ಬಿ.ಆರ್​., ಸಾಧನಾ ಸಂಸ್ಥೆ ಸಂಸ್ಥಾಪಕಿ ಡಾ. ಇಸಬೆಲ್ಲಾ ಝೇವಿಯರ್​, ವಿಶ್ವೇಶ್ವರಿ ಹಿರೇಮಠ, ವೆಂಕಮ್ಮ ಸೋಮಾಪುರ, ಸದಸ್ಯರಾದ ಸವಿತಾ ಸರನಾಡಗೌಡರ, ಅನಿತಾ ಜಕ್ಕಲಿ, ಸಿಸ್ಟರ್​ ಸಾಲಿ ಡಿಸೋಜ, ಇತರರು ಇದ್ದರು. ಶೈಲಜಾ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net