ಎಸ್‌ಬಿಐನಿಂದ ಬ್ಯೂಟಿ ಪಾರ್ಲರ್ ನಿರ್ವಹಣೆ ತರಬೇತಿ

Computer Tailoring BeautyParlor
Published on

ಕಲಬುರಗಿ: ಎಸ್‌ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನ.16ರಿಂದ ಡಿ.15ರವರೆಗೆ ಬ್ಯೂಟಿ ಪಾರ್ಲರ್ ನಿರ್ವಹಣೆ ಬಗ್ಗೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಬಿಐ ಆರ್‌ಸೆಟ್ ನಿರ್ದೇಶಕರು ತಿಳಿಸಿದ್ದಾರೆ.

ತರಬೇತಿ ಸಮಯದಲ್ಲಿ ಉಚಿತ ಊಟ, ವಸತಿ ಒದಗಿಸಲಾಗುವುದು. ಜಿಲ್ಲೆಯ ಗ್ರಾಮೀಣ ಭಾಗದ ಕನ್ನಡ ಓದಲು ಮತ್ತು ಬರೆಯಲು ಬರುವ 18ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ನ.10 ಕೊನೆಯ ದಿನವಾಗಿದ್ದು, 4 ಆಧಾರ್ ಕಾರ್ಡ್ ಪ್ರತಿ, 4 ಭಾವಚಿತ್ರ, ಅಂತ್ಯೋದಯ ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಪ್ರತಿ ನೀಡಬೇಕು. ಮಾಹಿತಿಗೆ ಮೊ.98867 81239, 99001 35705, 70199 39996, 99010 98123ಗೆ ಕರೆ ಮಾಡಬಹುದು. ನ.10ರಂದು ಬೆಳಗ್ಗೆ 10ರಿಂದ 3.30ರವರೆಗೆ ಸಂದರ್ಶನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net