ಸೌಂದರ್ಯ ಸ್ಪರ್ಧೆ : ಪಿ ಆ್ಯಂಡ್ ಜಿ ಕ್ರಿಯೇಷನ್ಸ್‌ನ ಐವರಿಗೆ ಪ್ರಶಸ್ತಿ

MDK03
Published on

ಮಡಿಕೇರಿ: ಜಸ್ಪ್ರೆಟ್ ಕೌರ್ ಹಾಗೂ ನಂದಿನಿ ನಾಗರಾಜ್‌ರವರು ಗೋವಾದ ಲಾ ಗ್ರಾಸಿನಾ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಮಿಸಸ್ ಇಂಡಿಯಾ ಐಯಾಮ್ ಪವರ್ ಫುಲ್ ಎಂಡ್ ಇಂಡಿಯಾಸ್ ಚಾರ್ಮಿಂಗ್ ಫೇಸ್ ಸೌಂದರ್ಯ ಸ್ಪರ್ಧೆಯಲ್ಲಿ ಕೊಡಗಿನ ಪಿ ಆ್ಯಂಡ್ ಜಿ ಕ್ರಿಯೇಷನ್ಸ್‌ನ ರೂಪದರ್ಶಿಗಳು ಪ್ರಶಸ್ತಿ ಪಡೆದುಕೊಂಡರು.


ಮಲ್ಲಮಾಡ ಶಾಮಲಾ ಸುನಿಲ್ ಮಿಸೆಸ್ ಇಂಡಿಯಾ ಅರ್ಥ್ ಕಿರೀಟ ಧರಿಸಿದರು. ಇವರು ಮುಂದಿನ ವರ್ಷ ನಡೆಯಲಿರುವ ಮಿಸೆಸ್ ಅರ್ಥ್ ಸ್ಪರ್ಧೆಯಲ್ಲಿ ಪೈಪೋಟಿ ನೀಡಲಿದ್ದಾರೆ. ಕಳೆದ ತಿಂಗಳಷ್ಟೇ ಶಾಮಲಾ ದಕ್ಷಿಣ ಭಾರತದ ರಾಯಭಾರಿಯಾಗಿ ಆಯ್ಕೆಯಾಗಿದ್ದರು.


ಅಳಮೇಂಗಡ ದಿಶಾ ಚಂಗಪ್ಪರವರು ಹದಿಹರೆಯದವರ ವಿಭಾಗದಲ್ಲಿ ಕಿರೀಟವನ್ನು ಗೆದ್ದರು ಮತ್ತು ಮಿಸ್ ಸೌತ್ ಇಂಡಿಯಾ ಟೀನ್ ಆಗಿ ಆಯ್ಕೆಯಾದರು. ಬಾನಂಗಡ ಭಾಗ್ಯ ಪ್ರದೀಪ್‌ರವರು ಮಿಸೆಸ್ ಇಂಡಿಯಾ ಫ್ಯಾಷನ್ ಐಕಾನ್ ಮತ್ತು ಮಿಸೆಸ್ ಇಂಡಿಯಾ ಆಂತರಿಕ ಸೌಂದರ್ಯ ಪ್ರಶಸ್ತಿಯನ್ನು ಗೆದ್ದುಕೊಂಡರು.


ಕುಪ್ಪನಮಾಡ ಮೇಘನಾ ಮುತ್ತಮ್ಮರವರು ಮಿಸ್ ಇಂಡಿಯಾ ಟೀನ್ ಎಲಿಗನ್ಸಿ ಪ್ರಶಸ್ತಿ ಪಡೆದರು. ಶಮಕ ಅವರು ಮಿಸಸ್ ಅಟಿಟ್ಯುಡ್ ಮತ್ತು ಮಿಸಸ್ ಬಾಡಿ ಬ್ಯೂಟಿಫುಲ್ ಪ್ರಶಸ್ತಿ ಗೆದ್ದರು. ಫ್ಯಾಷನ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಪಿ ಆ್ಯಂಡ್ ಜಿ ಕ್ರಿಯೇಷನ್ಸ್‌ನ ಬಾಳೆಯಡ ಪ್ರತೀಶ್ ಪೂವಯ್ಯ, ಆಚೆಯಡ ಗಗನ್ ಗಣಪತಿ ಹಾಗೂ ಬ್ರಾಂಡ್ ಅಂಬಾಸಿಡರ್ ಕೊನಿಯಂಡ ಕಾವ್ಯ ಅವರ ಮಾರ್ಗದರ್ಶನದಲ್ಲಿ ಇವರುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.


ಗೋವಾದ ಲಾ ಗ್ರಾಸಿನಾ ರೆಸಾರ್ಟ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ ೬೦ ಕ್ಕೂ ಅಧಿಕ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net