ಅಂದ ಹೆಚ್ಚಿಸಿಕೊಂಡ ಗುರುಗಂಟಾ ಶಾಲೆ

291222 Gurugunta School
ಸಾರ್ವಜನಿಕರ ಸಹಕಾರದೊಂದಿಗೆ ಸುಣ-ಬಣ್ಣ ಕಂಡ ಗುರುಗುಂಟಾದ ಸ.ಮಾ.ಹಿ.ಪ್ರಾ.ಶಾಲೆಯ ಚಿತ್ರ.
Published on

ಗುರುಗುಂಟ: ಇಲ್ಲಿನ ಸ.ಮಾ.ಹಿ.ಪ್ರಾ.ಶಾಲೆಯ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ವಿಜಯಕುಮಾರ ನಾಯಕ ಗಲಗರ ಕಳಕಳಿಯಿಂದ ಐದು ಕೊಠಡಿಗಳು ಸುಣ್ಣ-ಬಣ್ಣದ ಭಾಗ್ಯ ಕಂಡಿವೆ.

ಶಾಲೆಗೆ ಬರುವ ಅನುದಾನ ಸಣ್ಣ-ಪುಟ್ಟ ಕೆಲಸಗಳಿಗೂ ಸಾಲದಾಗಿತ್ತು. ಇದನ್ನು ಮನಗಂಡು ಸಂಕಲ್ಪ ಹೊತ್ತು ಶಾಲೆಯ ಅಂದ ಹೆಚ್ಚಿಸಲು ವಿಜಯಕುಮಾರ ಶ್ರಮಕ್ಕೆ ಚನ್ನಯ್ಯಸ್ವಾಮಿ ಹೊರಪೇಟಮಠ, ಲಕ್ಷ್ಮೀನಾರಾಯಣ ಹಾಗೂ ರಮೇಶ ಬಸಾಪೂರ ಸಾಥ್ ನೀಡಿದ್ದಾರೆ. ಶಾಲೆಗೆ ಸುಣ್ಣಬಣ್ಣ ವಿಚಾರಕ್ಕೆ ಸಂಬಂಧಿಸಿ ವಿಜಯಕುಮಾರ ಅವರು, ಗುರುಗುಂಟಾ ಸಂಸ್ಥಾನದ ಒಡೆಯ ರಾಜಾ ಸೋಮನಾಥ ನಾಯಕರನ್ನು ಭೇಟಿ ಮಾಡಿದ್ದರು. ಸೋಮನಾಥ ನಾಯಕರು ಶಿಕ್ಷಣ ಪ್ರೇಮಿಗಳಾದ ಚನ್ನಯ್ಯಸ್ವಾಮಿ ಹೊರಪೇಟಮಠ, ಲಕ್ಷ್ಮೀನಾರಾಯಣ ಹಾಗೂ ರಮೇಶ ಬಸಾಪೂರ ಅವರಿಗೆ ಫೋನಾಯಿಸಿ, ಈ ಕೆಲಸದ ಜವಾಬ್ದಾರಿ ಒಪ್ಪಿಸಿ, 50 ಸಾವಿರ ರೂ. ನೆರವು ನೀಡಿದ್ದಾರೆ. ಈಗ 5 ಕೊಠಡಿಗಳು ಸುಣ್ಣ-ಬಣ್ಣಗಳಿಂದ ಕಂಗೊಳಿಸುತ್ತಿದೆ.

ಗುರುಗುಂಟಾ ಶಾಲೆ ಅಭಿವೃದ್ಧಿಗೆ ರಾಜಾ ಸೋಮನಾಥ ನಾಯಕರು ಸಹಕರಿಸಿದ್ದಾರೆ.| ವಿಜಯಕುಮಾರ ಗಲಗ, ಎಸ್ಡಿಎಂಸಿ ಅಧ್ಯಕ್ಷ, ಗುರುಗುಂಟಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net