ಸೌಂದರ್ಯ-ಧೈರ್ಯದ ಪ್ರತೀಕ

05-10-ಗೊರೇಬಾಳ-01
ಗೊರೇಬಾಳ ಸಮೀಪದ ಹೊಸಳ್ಳಿ.ಇ.ಜೆ ಕ್ಯಾಂಪಿನ ದುರ್ಗಾಪರಮೇಶ್ವರಿ ದೇವಿಗೆ ಚಂದ್ರಘಂಟಾ ರೂಪದಲ್ಲಿ ಅಲಂಕಾರಗೊಳಿಸಲಾಗಿತ್ತು.
Published on

ಗೊರೇಬಾಳ: ಸಮೀಪದ ಹೊಸಳ್ಳಿ ಇ.ಜೆ ಕ್ಯಾಂಪಿನ ದುರ್ಗಾಪರಮೇಶ್ವರಿ ದೇವಿಗೆ ಶನಿವಾರ ನವರಾತ್ರಿ ಮೂರನೇ ದಿನ ಚಂದ್ರಘಂಟಾ ರೂಪದಲ್ಲಿ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿಸಿದರು.

ಚಂದ್ರಘಂಟಾ ದೇವಿಯ ಸ್ವರೂಪ ಸೌಂದರ್ಯ, ಧೈರ್ಯ ಹಾಗೂ ಪರಮಶಾಂತಿದಾಯಕ. ಶ್ರೇಯಸ್ಕರ ದಶ ಹಸ್ತಗಳುಳ್ಳ ದೇವಿ ಶಸ್ತ್ರ ಸಜ್ಜಿತಳಾಗಿ ಯುದ್ದಕ್ಕೆ ಸನ್ನದ್ಧಳಾಗಿರುವಂತೆ ಕಾಣುತ್ತಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net