ಸ್ವಚ್ಛ ಪರಿಸರದಿಂದ ಸುಂದರ ಸಮಾಜ

1 ಎಸ್ಕೆಪಿ 2g
ಶಿಕಾರಿಪುರದ ಪರೋಪಕಾರಂ ತಂಡದ ಜತೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಭರತ್, ರಾಜ್‌ಕುಮಾರ್, ಪಾಲಾಕ್ಷಪ್ಪ, ನಿವೇದಿತಾ ರಾಜು, ಗಾಯತ್ರಿ ಮಲ್ಲಪ್ಪ, ರುದ್ರಮುನಿ ಇದ್ದರು.
Published on

ಶಿಕಾರಿಪುರ: ಸ್ವಚ್ಛ ಪರಿಸರ ಸ್ವಾಸ್ಥೃ ಸಮಾಜವನ್ನು ನಿರ್ಮಾಣ ಮಾಡಲಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ಇರಲಿ. ಸ್ವಚ್ಛ, ಸುಂದರ ಮತ್ತು ಆರೋಗ್ಯ ಪೂರ್ಣ ಸಮಾಜ ನಮ್ಮ ಧ್ಯೇಯ ಆಗಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಧಾನಿ ಮೋದಿ ಅವರು ತಮ್ಮ ಕಾರ್ಯಕ್ಷಮತೆ, ಕರ್ತತ್ವ ಶಕ್ತಿ, ದೂರದೃಷ್ಟಿ, ಸಾಮಾಜಿಕ ಕಳಕಳಿಯಿಂದ, ತಮ್ಮ ಚಾಣಾಕ್ಷ ಆಡಳಿತದಿಂದ ಇಂದು ವಿಶ್ವ ನಾಯಕನ ಸ್ಥಾನದಲ್ಲಿ ಇದ್ದಾರೆ. ಅವರು ಪ್ರಧಾನಿ ಆದ ದಿನದಿಂದಲೂ ಸ್ವಚ್ಛತೆ, ಸ್ವಚ್ಛ ಪರಿಸರ ದಿವ್ಯ ಮಂತ್ರವಾಗಿದೆ ಎಂದರು.
ಸ್ವಚ್ಛತೆಯನ್ನು ಮೊದಲು ನಮ್ಮ ಮನೆಯಿಂದಲೇ ಪ್ರಾರಂಭ ಮಾಡೋಣ.ನಂತರ ನಮ್ಮ ಕೇರಿ, ಓಣಿ ಗ್ರಾಮದ ಸ್ವಚ್ಛತೆಯತ್ತ ಗಮನ ಹರಿಸಬೇಕು. ಸ್ವಚ್ಛತೆಯಿದ್ದಲ್ಲಿ ಅನಾರೋಗ್ಯ ದೂರ ಇರುತ್ತದೆ. ಅಕಾಲಿಕ ಮಳೆಯಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಮಾಡಲು ಪ್ರಥಮ ಚಿಕಿತ್ಸೆಯೇ ಸ್ವಚ್ಛತೆ ಎಂದರು.
ಪುರಸಭಾ ಸದಸ್ಯರಾದ ಪಾಲಾಕ್ಷಪ್ಪ, ರೂಪಾ ಮಂಜುನಾಥ್, ಬಿಜೆಪಿ ಯುವಮೋರ್ಚಾ ನಗರಾಧ್ಯಕ್ಷ ಬೆಣ್ಣೆ ಪ್ರವೀಣ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾಘವೇಂದ್ರ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಆರ್.ಎಂ.ಕುಬೇರಪ್ಪ, ಪ್ರಾಚಾರ್ಯ ಡಾ. ವೀರೇಂದ್ರ, ಉಪನ್ಯಾಸಕ ಡಾ. ವೀರೇಂದ್ರ ಕುಮಾರ್ ವಾಲಿ, ವಿದ್ಯಾಶಂಕರ್, ಸುಧೀರ್ ಮಾರವಳ್ಳಿ, ವಿಶ್ವನಾಥ್ ಇತರರಿದ್ದರು.
ಪರೋಪಕಾರಂನಿಂದ ಹುಚ್ಚರಾಯಸ್ವಾಮಿ ಪಾರ್ಕ್‌ನಿಂದ ಹೊನ್ನಾಳಿ ರಸ್ತೆಯವರೆಗೆ ಶ್ರಮದಾನ ಮಾಡಲಾಯಿತು. ಪುರಸಭೆ ಮುಖ್ಯಾಧಿಕಾರಿ ಭರತ್, ಹಿರಿಯ ಅಧಿಕಾರಿ ರಾಜ್‌ಕುಮಾರ್, ಸದಸ್ಯ ಪಾಲಾಕ್ಷಪ್ಪ, ನಿವೇದಿತಾ ರಾಜು, ಗಾಯತ್ರಿ ಮಲ್ಲಪ್ಪ, ರುದ್ರಮುನಿ, ಫೌರಕಾರ್ಮಿಕರು ಭಾಗವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net