ನಗರದಲ್ಲಿ ಕರಡಿ ಪ್ರತ್ಯಕ್ಷ

Published on

ಬಳ್ಳಾರಿ : ಇಲ್ಲಿನ ಕಂಟೋನೆಮೆಂಟ್ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಕರಡಿ ಪ್ರತ್ಯಕ್ಷವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಯಾಗಿದೆ.

ನಗರ ಬಿಮ್ಸ್ ಮೈದಾನ, ಸೇಂಟ್ ಫಿಲೋಮಿನಾ ಶಾಲೆ, ಸುಧಾ ಕ್ರಾಸ್ ಸೇರಿದಂತೆ ವಿವಿಧಡೆ ಕರಡಿ ಅಲೆದಾಡಿರುವ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳೀಯರು ಕರಡಿ ಪ್ರತ್ಯಕ್ಷವಾಗಿರುವ ಅತಂಕ ವ್ಯಕಪಡಿಸಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕರಡಿ ಸೆರೆ ಹಿಡಿಯಲು ಅಧಿಕಾರಿಗಳು ಕಾರ್ಯಪೃವತ್ತರಾಗಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net