ತಡರಾತ್ರಿ ಮನೆ ಬಳಿ ಸುಳಿದಾಡಿದ ಕರಡಿ; ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Bear
Published on

ಬೆಂಗಳೂರು: ಬನ್ನೇರುಘಟ್ಟ ಪ್ರದೇಶದಲ್ಲಿ ತಡರಾತ್ರಿ ಕರಡಿಯೊಂದು ಮನೆಯ ಬಳಿಯೇ ಓಡಾಟ ನಡೆಸಿದ್ದು, ಸುತ್ತಮುತ್ತಲ ಹಳ್ಳಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಬನ್ನೇರುಘಟ್ಟದ ಬೇಗಿಹಳ್ಳಿ ಬಳಿ ಮತ್ತೆ ಕರಡಿ ಪ್ರತ್ಯಕ್ಷವಾಗಿದ್ದರಿಂದ ಭಯದ ಪರಿಸ್ಥಿತಿ ಮರುಕಳಿಸಿದೆ.

ಬೇಗಿಹಳ್ಳಿ ಗ್ರಾಮದ ಅಪರ್ಣಮ್ಮ ರೇವಣ್ಣ ಎಂಬುವವರ ಮನೆಯ ಬಳಿ ಕಳೆದ ರಾತ್ರಿ 2 ಗಂಟೆ ಸುಮಾರಿಗೆ ಕರಡಿ ಓಡಾಟ ನಡೆಸಿರುವುದು ಕಂಡುಬಂದಿದೆ. ಕರಡಿಯು ಮನೆಯ ಸುತ್ತ ಸುಳಿದಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆನೇಕಲ್ ತಾಲೂಕಿನಾದ್ಯಂತ ಒಂದು ತಿಂಗಳ ಹಿಂದೆ ಕರಡಿ ಕಾಣಿಸಿಕೊಂಡಿದ್ದು, ಇದೀಗ ಮತ್ತೆ ಅದರ ಓಡಾಟ ಕಂಡುಬಂದಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net