ವೃದ್ಧ ರೈತನ ಮೇಲೆ ಕರಡಿ ದಾಳಿ

Bear attacks farmer
Published on

ಕುಕನೂರು: ತಾಲೂಕಿನ ರ‌್ಯಾವಣಕಿ ಸಮೀಪದ ಜಮೀನಿನಲ್ಲಿ ವೃದ್ಧ ರೈತನ ಮೇಲೆ ಶುಕ್ರವಾರ ಕರಡಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ.

ರ‌್ಯಾವಣಕಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದ ಜಮೀನಿಗೆ ಹೋಗಿದ್ದ 60 ವರ್ಷದ ನಾಗಪ್ಪ ಬೆಂಚಳ್ಳಿ ಕರಡಿ ದಾಳಿಗೊಳಗಾದ ರೈತ. ತಲೆ, ಕೈ, ಕಾಲುಗಳಿಗೆ ಕಚ್ಚಿ ಗಾಯಗೊಳಿಸಿರುವ ಕರಡಿ, ರಸ್ತೆ ಹೋಕರು ಗಲಾಟೆ ಮಾಡಿದ್ದರಿಂದ ಸ್ಥಳದಿಂದ ಓಡಿ ಹೋಗಿದೆ.

ತಾಯಿ ಕರಡಿ ಮತ್ತು ಎರಡು ಮರಿ ಒಟ್ಟು ಮೂರು ಕರಡಿಗಳು ಕಾಣಿಸಿಕೊಂಡಿವೆ. ಗಾಯಾಳು ರೈತನನ್ನು ಸಮೀಪದ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕರಡಿಗಳನ್ನು ಹಿಡಿಯಲು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net