ಇಬ್ಬರ ಮೇಲೆ ಕರಡಿ ದಾಳಿ

Karadi
Published on

ಯಲ್ಲಾಪುರ: ದನ ಮೇಯಿಸುತ್ತಿದ್ದ ಮಹಿಳೆ ಹಾಗೂ ಪುರುಷನ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಕಣ್ಣಿಗೇರಿ ಸಮೀಪದ ಸೆಳೆಬೈಲ್-ಸರಳಕಂಡದ ಬಳಿ ಬುಧವಾರ ನಡೆದಿದೆ.

ಕಾರೆಮನೆಯ ನಕ್ಕಲಿ ಜಾನು ಗೌಳಿ ಹಾಗೂ ಸೆಳೆಬೈಲಿನ ಕೇಶವ ಗೌಳಿ ಗಾಯಗೊಂಡವರು. ನಕ್ಕಲಿ ಗೌಳಿ ಎಂಬ ಮಹಿಳೆ ದನ ಮೇಯಿಸುತ್ತಿದ್ದಾಗ ಏಕಾಏಕಿ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ. ಇದನ್ನು ಕಂಡ ಕೇಶವ ಗೌಳಿ ಆಕೆಯನ್ನು ರಕ್ಷಿಸಲು ಹೋಗಿದ್ದು, ಅವರ ಮೇಲೂ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ. ಗಾಯಾಳುಗಳನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡ ನಕ್ಕಲಿ ಗೌಳಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net