ಕರಡಿ ದಾಳಿ ರೈತ ಗಂಭೀರ

bear attack man injured
Published on

ಜೊಯಿಡಾ: ತಾಲೂಕಿನ ರಾಮನಗರದಿಂದ ತಿಂಬೋಲಿ ಹೋಗುವ ಮಾರ್ಗದಲ್ಲಿ ಕರಡಿ ದಾಳಿಯಿಂದ ವ್ಯಕ್ತಿಯೊಬ್ಬ ಗಂಬೀರವಾಗಿ ಗಾಯಗೊಂದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ವಿಠ್ಠು ತಾನಾಜಿ ಶೇಳಕೆ ಕರಡಿ ದಾಳಿಯಿಂದ ಗಾಯಗೊಂಡಿದ್ದಾರೆ. ರಾಮನಗರದಿಂದ ತಿಂಬೋಲಿಗೆ ಇವನ ಅಣ್ಣನ ಮನೆಗೆ  ನಡೆಸುಕೊಂಡು  ಹೋಗುತ್ತಿರುವಾಗಿ ಕರಡಿ ದಾಳಿಮಾಡಿ ಗಾಯಗೊಳಿಸಿದೆ. ಎಡ ಕಣ್ಣು,ತಲೆ ಮತ್ತು ಕೈಗೆ ಗಂಬೀರವಾಗಿ ಕರಡಿ ಗಾಯಗೊಳಿಸಿದೆ. ರಾಮನಗರ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಬೇಳಗಾವಿಗೆ ಹೆಚ್ಚಿನ ಚಿಕಿತ್ಸೆಗೆ ಕೊಂಡೋಯ್ಯಲಾಗಿದೆ.

ಜಗಲಬೇಟ ಎಸಿಎಪ್ ಕೆ.ಡಿ ನಾಯ್ಕ ಮತ್ತು  ಜಗಲಬೇಟ ಆರ್‌ ಎಫ್ಒ ಚಂದ್ರಕಾಂತ ಹಿಪ್ಪರಗಿ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಗಾಯಗೊಂಡ ವ್ಯಕ್ತಿಯನ್ನು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net