ಒಂದೇ ಕುಟುಂಬದ ಮೂವರ ಮೇಲೆ ಕರಡಿ ದಾಳಿ

bear attack in koppal man injured treatment in hospital
ಕರಡಿ ದಾಳಿಯಿಂದ ಗಾಯಗೊಂಡಿರುವ ನಾಗೇಶನಳ್ಳಿ ಗ್ರಾಮದ ಹೇಮವ್ವ.
Published on

ಕೊಪ್ಪಳ: ಜಿಲ್ಲೆಯಲ್ಲಿ ಮತ್ತೆ ಕರಡಿ ದಾಳಿಗಳು ಕಾಣಿಸಿಕೊಳ್ಳತೊಡಗಿವೆ. ತಾಲೂಕಿನ ನಾಗೇಶನಳ್ಳಿ ಗ್ರಾಮದಲ್ಲಿ ಬುಧವಾರ ತಡ ರಾತ್ರಿ ಒಂದೇ ಕುಟುಂಬದ ಮೂವರ ಮೇಲೆ ಕರಡಿ ದಾಳಿ ನಡೆಸಿದ್ದು, ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಗೇಶನಳ್ಳಿ ಗ್ರಾಮದ ಈರಪ್ಪ, ಹೇಮವ್ವ ಹಾಗೂ ಗೌತಮಿ ದಾಳಿಗೆ ಒಳಗಾದವರು. ಈರಪ್ಪ ಕುಟುಂಬ ಜಮೀನಿನಲ್ಲಿ ಮನೆ ಮಾಡಿಕೊಂಡು ವಾಸವಿದೆ. ರಾತ್ರಿ ವೇಳೆ ಬೈಕ್​ನಲ್ಲಿ ಗ್ರಾಮದಿಂದ ಹೊಲಕ್ಕೆ ತೆರಳುವಾಗ ದಾರಿ ಮಧ್ಯದಲ್ಲಿ ಕರಡಿ ದಾಳಿ ನಡೆಸಿದೆ. ಗೌತಮಿ ಬಾಯಿಗೆ, ಹೇಮವ್ವ ಮುಖಕ್ಕೆ ಹಾಗೂ ಈರಪ್ಪನ ತಲೆಗೆ ಕರಡಿ ಕಚ್ಚಿ ತೀವ್ರ ಗಾಯಗೊಳಿಸಿದೆ. ಮೂವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೇಸಿಗೆ ಬಿಸಿಲು ಹೆಚ್ಚಿದೆ. ಆಹಾರ, ನೀರು ಅರಸಿ ಕರಡಿಗಳು ಜನ ನಿಬಿಡ ಪ್ರದೇಶಗಳಿಗೆ ಬರುವುದು ಹೆಚ್ಚುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಇರಕಲ್​ ಗಡಾದಲ್ಲಿ ವ್ಯಕ್ತಿಯೋರ್ವನ ಮೇಲೆ ಮೂರು ಕರಡಿಗಳು ಏಕ ಕಾಲಕ್ಕೆ ದಾಳಿ ನಡೆಸಿ ಗಾಯಗೊಳಿಸಿದ್ದವು. ಇರಕಲ್​ ಗಡಾ, ಬೂದಗುಂಪಾ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಕರಡಿಗಳು ಅಧಿಕ ಸಂಖ್ಯೆಯಲ್ಲಿ ವಾಸವಿವೆ. ಕರಡಿ ಧಾಮ ಘೋಷಣೆಯಾಗಿದ್ದು, ಕಾಮಗಾರಿ ವೇಗ ಪಡೆದಲ್ಲಿ ಪ್ರಾಣಿ&ಮಾನವ ಸಂರ್ಷ ನಿಯಂತ್ರಣಕ್ಕೆ ತರಲು ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net