ಕರಡಿ ದಾಳಿ, ರೈತನಿಗೆ ಗಂಭೀರ ಗಾಯ

Bear Attack
Published on

ಖಾನಾಪುರ: ತಾಲೂಕಿನ ಚಿಗುಳೆ ಗ್ರಾಮದಲ್ಲಿ ಕರಡಿ ತನ್ನ ಎರಡು ಮರಿಗಳೊಂದಿಗೆ ರೈತನ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಟನೆ ಭಾನುವಾರ ನಡೆದಿದೆ.

ಚಿಗುಲೆ ಗ್ರಾಮದ ವಿಲಾಸ ಹೇಮಾಜಿ ಚಿಕ್ಕಲ್ಕರ (55) ಗಾಯಗೊಂಡಿರುವ ರೈತ. ಈತ ಎಂದಿನಂತೆ ಹೊಲಕ್ಕೆ ಹೋಗಿದ್ದಾನೆ. ಅಲ್ಲಿನ ಗುಡಿಸಲು ಪ್ರವೇಶಿಸುತ್ತಿದ್ದಂತೆ ಅಲ್ಲಿ ಎರಡು ಮರಿಗೊಂದಿಗೆ ಮಲಗಿದ್ದ ಕರಡಿ ದಾಳಿ ಮಾಡಿ ರೈತನ ಬಾಯಿಯ ಎಡಭಾಗವನ್ನು ಕಿತ್ತು ಹಾಕಿದೆ. ಕೈಕಾಲು ಹಾಗೂ ವಿವಿಧೆಡೆ ಗಂಭೀರವಾಗಿ ಗಾಯಗೊಳಿಸಿದೆ. ರೈತ ಪ್ರತಿರೋಧ ವ್ಯಕ್ತಪಡಿಸಿ ಕರಡಿಯ ಹಿಡಿತದಿಂದ ಪಾರಾಗಿದ್ದಾನೆ.

ಗಂಭೀರ ಗಾಯಗೊಂಡಿದ್ದ ರೈತನಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್​ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net