ಕರಡಿ ದಾಳಿ ರೈತ ಸಾವು

bear attack farmer died
Published on

ಮುಂಡಗೋಡ: ಗದ್ದೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಕರಡಿಗಳು ದಾಳಿ ನಡೆಸಿದ ಪರಿಣಾಮ ರೈತನೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಮರಗಡಿ ಗ್ರಾಮದ ಸನಿಹ ಗುರುವಾರ ಸಂಜೆ ನಡೆದಿದೆ.
ಮರಗಡಿ ಗ್ರಾಮದ ಜಿಮ್ಮು ವಾಗು ತೊರವತ್ (58) ಮೃತರು.
ತಮ್ಮ ಗದ್ದೆಯಲ್ಲಿ ಭತ್ತ ಬೆಳೆಯಲಾಗಿದೆ ಎಂದಿನಂತೆ ಸಂಜೆಯ ವೇಳೆ ಗದ್ದೆಯಿಂದ ಅರಣ್ಯ ಮಾರ್ಗವಾಗಿ ಮನೆಗೆ ತೆರಳುತ್ತಿದ್ದ ವೇಳೆ ಕರಡಿಗಳು ದಾಳಿ ನಡೆಸಿ ಕುತ್ತಿಗೆ, ತಲೆ, ಕೈ, ಕಾಲು ಗಳಿಗೆ ಕಚ್ಚಿ ತೀವ್ರ ಗಾಯಗೊಳಿಸಿದ ಪರಿಣಾಮ ಜೀಮ್ಮು ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಖತರ್ನಾಕ್​ ಕಳ್ಳನನ್ನು ಬಂಧಿಸಿದ ಬೆಂಗಳೂರು ಪೊಲೀಸರು!
ಕತ್ತಲಾದರು ಅವರು ಮನೆಗೆ ಬಾರದ ಕಾರಣ ಕುಟುಂಬದವರು ಹುಡುಕಾಟ ನಡೆಸಿದಾಗ ರಾತ್ರಿಯ ವೇಳೆ ಕರಡಿ ದಾಳಿಯಿಂದ ಅವರು ತೀವ್ರ ಗಾಯಗೊಂಡು ಮೃತಪಟ್ಟಿರುವುದು ಕಂಡುಬಂದಿದೆ.
ಆದರೂ ಅವರನ್ನು ತಕ್ಷಣವೇ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಜಿಮ್ಮು ಅವರು ಸಾವನ್ನಪ್ಪಿರುವ ಬಗ್ಗ ವೈದ್ಯರು ದೃಢಪಡಿಸಿದರು.
ಶುಕ್ರವಾರ ಬೆಳಗ್ಗೆ ಯಲ್ಲಾಪುರ ಡಿಎಫ್ಒ ಎಸ್.ಜಿ. ಹೆಗಡೆ ಅಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಹಾಗೂ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net