3 ತಿಂಗಳಲ್ಲಿ 6 ಜನರ ಮೇಲೆ ಕರಡಿ ದಾಳಿ

Bear attack
Published on

ಡಿಎಫ್‌ಒ ಹಳಿಯಾಳ ಪ್ರಶಾಂತ ಕುಮಾರ ಕೆ.ಸಿ.ಕರಡಿ ದಾಳಿಗೆ ಒಳಗಾದವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸಲಿದೆ. ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ 5 ಲಕ್ಷ ರೂ. ಹಾಗೂ ಮೃತಪಟ್ಟರೆ 15 ಲಕ್ಷ ರೂ. ಪರಿಹಾರ ನೀಡಲು ಅವಕಾಶವಿದೆ. ಮುಖ್ಯವಾಗಿ ನಾವು ಕರಡಿ ದಾಳಿಯಿಂದ ಸಂರಕ್ಷಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕನೀಲೇಶ ಶಿಂಧೆಕರಡಿ ದಾಳಿಗಳು ಹೆಚ್ಚಿದ್ದು, ನಿಜ. ಸ್ವಯಂ ಸೇವಾ ಸಂಸ್ಥೆಯೊಂದರ ಜತೆ ನಾವು ಕರಡಿ ದಾಳಿಗಳ ಬಗ್ಗೆ ಅಧ್ಯಯನ ನಡೆಸಿದ್ದೇವೆ. ಆದರೆ, ದಾಳಿಯಲ್ಲಿ ಯಾವುದೇ ನಿರ್ದಿಷ್ಟ ಸ್ವರೂಪ ಕಂಡುಬಂದಿಲ್ಲ. ನಾವು ಚಿರತೆ, ಹುಲಿ ಗಣತಿಗಾಗಿ ಅಳವಡಿಸುವ ಕ್ಯಾಮರಾಗಳಲ್ಲಿ ಕರಡಿಗಳೂ ಸೆರೆ ಸಿಕ್ಕಿದ್ದಿವೆ. ಆದರೆ, ಎಷ್ಟು ಕರಡಿಗಳಿವೆ ಎಂದು ನಿರ್ದಿಷ್ಟವಾಗಿ ಲೆಕ್ಕವಿಲ್ಲ. ಆದರೆ, ಕರಡಿ ದಾಳಿಯಿಂದ ಸಂರಕ್ಷಿಸಿಕೊಳ್ಳುವ ಬಗ್ಗೆ ನಾವು ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲಿ ಜಾಗೃತಿ ಮೂಡಿಸಲಿದ್ದೇವೆ. *ಕರಡಿಗಳು ಹೊಟ್ಟೆ, ಮುಖ, ಕಣ್ಣುಗಳ ಮೇಲೆ ದಾಳಿ ಮಾಡುವುದರಿಂದ ಪ್ರಾಣಾಪಾಯವಾಗುವ ಸಂಭವ ಹೆಚ್ಚು, ಹಾಗಾಗಿ ದಾಳಿ ಮಾಡಿದಾಗ ಹೊಟ್ಟೆಯಲ್ಲಿ ಮಗು ಮಲಗಿರುವಂತೆ ಮುಡುಗಿ ಮಲಗಿಕೊಂಡರೆ ಅಪಾಯ ಕಡಿಮೆ ಮಾಡಬಹುದು.*ಸಾಯಂಕಾಲ,ಬೆಳಗಿನಜಾವ ಮುಂತಾದ ಸಮಯಗಳಲ್ಲಿ ಕರಡಿ ದಾಳಿಗಳಾಗುವುದು ಹೆಚ್ಚು, ಇದರಿಂದ ಆ ವೇಳೆಯಲ್ಲಿ ಓಡಾಟ ಕಡಿಮೆ ಮಾಡುವುದು ಒಳಿತು.*ಸಾಮಾನ್ಯವಾಗಿ ಒಬ್ಬಂಟಿಯಾಗಿ ಓಡಾಡುವವರ ಮೇಲೆ ಕರಡಿಗಳು ದಾಳಿ ಮಾಡುವುದರಿಂದ ಗುಂಪಾಗಿ, ಪರಸ್ಪರ ಮಾತನಾಡುತ್ತ ಓಡಾಡುವುದು ಒಳಿತು.ಕರಡಿಯಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು..?ಸಾಮಾನ್ಯವಾಗಿ ಮೇ ಜೂನ್, ಜುಲೈ ತಿಂಗಳಲ್ಲಿ ಕರಡಿ ದಾಳಿಗಳು ಹೆಚ್ಚುತ್ತವೆ. ಕರಡಿಗಳು ಹಲಸಿನ ಹಣ್ಣು ಆಗುವ ವೇಳೆಯಲ್ಲಿ ಆ ಮರಗಳ ಸುತ್ತ ಓಡಾಡುವುದಿದೆ. ಜನ, ಏಡಿ ಹಿಡಿಯಲು, ಅಣಬೆ ಕೀಳಲು ಕಾಡಿಗೆ ಏಕಾಂಗಿಯಾಗಿ ಹೋಗುವುದಿದೆ. ಇನ್ನು ಮರಿಗಳ ಜೊತೆ ಇರುವ ಕರಡಿಗಳು ಓಡಾಡುವ ಸಂದರ್ಭಗಳೂ ಇವೆ. ಇಂಥ ಸಂದರ್ಭದಲ್ಲಿ ಅವುಗಳು ದಾಳಿ ಮಾಡುತ್ತವೆ' ಎನ್ನುತ್ತಾರೆ. ಡೇರೇಕರ್.`ಜೊಯಿಡಾದಲ್ಲಿ ಕರಡಿ ದಾಳಿ ಈಗ ಶುರುವಾಗಿದ್ದಲ್ಲ. ಮೊದಲಿನಿಂದಲೂ ಇದೆ. ನಮ್ಮ ಕುಟುಂಬದ ಇಬ್ಬರು ಹಿರಿಯರೂ ಕರಡಿ ದಾಳಿಗೆ ಒಳಗಾಗಿ ಮೃತಪಟ್ಟಿದ್ದಾರೆ ಎನ್ನುತ್ತಾರೆ ಜೊಯಿಡಾ ಕುಣಬಿ ಸಮಾಜದ ಮುಖಂಡ ಜಯಾನಂದ ಡೇರೇಕರ್. ಕಳೆದ ಐದು ವರ್ಷಗಳ ಕರಡಿ ದಾಳಿಯ ಡೇಟಾ ತೆಗೆದರೆ ಪ್ರತಿ ವರ್ಷ ಕನಿಷ್ಠ 2 ರಿಂದ 3 ಕರಡಿ ದಾಳಿಗಳು ಜೊಯಿಡಾದಲ್ಲಿ ನಡೆಯುತ್ತಿರುತ್ತವೆ. ಆದರೆ, ಇತ್ತೀಚಿನ ವರ್ಷದಲ್ಲಿ ಅರಣ್ಯ ಇಲಾಖೆಯ ಸಂರಕ್ಷಣಾ ಕ್ರಮಗಳಿಂದ ಕರಡಿಗಳ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿರಬಹುದು. ಇದರಿಂದ ದಾಳಿಯ ಪ್ರಮಾಣವೂ ಹೆಚ್ಚಿರಬಹುದು.ಜೂನ್ ಜುಲೈ ತಿಂಗಳಲ್ಲಿ ಹೆಚ್ಚುಮರಿಗಳನ್ನು ಹೊಂದಿದ ಹೆಣ್ಣು ಕರಡಿ ಭಯದಿಂದ ಜನರ ಮೇಲೆ ದಾಳಿ ನಡೆಸುತ್ತವೆ ಎಂಬ ಅನುಮಾನವಿದ್ದರೂ ಎಲ್ಲ ಪ್ರಕರಣಗಳಲ್ಲಿಯೂ ಹಾಗಿಲ್ಲ. ಹಾಗಾಗಿ ಕರಡಿಗಳು ಮಾನವರ ಮೇಲೆ ಏಕೆ ದಾಳಿ ಮಾಡುತ್ತಿವೆ..?ಎಂಬ ಬಗ್ಗೆ ನಿರ್ದಿಷ್ಟ ಕಾರಣ ಅರಣ್ಯ ಇಲಾಖೆಗೂ ತಿಳಿದಿಲ್ಲ. ಆದರೆ, ದಾಳಿಗಳು ಹೆಚ್ಚಿದ ಕಾರಣ ಅದರಿಂದ ಜನ ಎಚ್ಚರಗೊಳ್ಳಲಲು ಜನಜಾಗೃತಿ ಕಾರ್ಯಕ್ರಮಗಳನ್ನು ಇಲಾಖೆ ಕೈಗೊಂಡಿದೆ. ಪ್ರತಿ ಅರಣ್ಯ ವಲಯಗಳಲ್ಲಿ ಈಗಾಗಲೇ ಕರ ಪತ್ರಗಳ ಹಂಚಿಕೆ ಕಾರ್ಯ ನಡೆದಿದೆ. ಅದರಲ್ಲಿ ಕರಡಿ ದಾಳಿಗೆ ಒಳಗಾದರೆ ಏನು ಮಾಡಬೇಕು. ಏನು ಮಾಡಬಾರದು ಎಂಬ ಅಶಂಗಳಿವೆ.ಜಾಗೃತಿ:ಕರಡಿ ದಾಳಿಗೆ ಒಳಗಾದವರಿಗೆ ಶೀಘ್ರ ಚಿಕಿತ್ಸೆಗೆ ಅರಣ್ಯ ಇಲಾಖೆ ಕ್ರಮ ವಹಿಸಿದೆ. ಜೂನ್ 21 ರಂದು ಹುಡಸಾದಲ್ಲಿ ದಾಳಿಗೊಳಗಾದ ವ್ಯಕ್ತಿಯನ್ನು ಶೀಘ್ರದಲ್ಲಿ ಆರಂಬುಲೆನ್ಸ್ ಕರೆಸಿ ಸಾಕಷ್ಟು ಕಡೆಗಳಲ್ಲಿ ತಿಳಿಸಿ ಗ್ರೀನ್ ಕಾರಿಡಾರ್ ಮಾದರಿಯ ವ್ಯವಸ್ಥೆ ಮಾಡಿ, ಧಾರವಾಡಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸಿಬ್ಬಂದಿ ಇದ್ದು, ಅವರ ಕಾಳಜಿ ವಹಿಸಿದ್ದಾರೆ ಎನ್ನುತ್ತಾರೆ ಆರ್‌ಎಫ್‌ಒ ಪ್ರವೀಣ ಚಲವಾದಿ.ಶೀಘ್ರ ಚಿಕಿತ್ಸೆಗೆ ವ್ಯವಸ್ಥೆಅಣಬೆ ತರಲು ಹೋದವರಿಗೆ, ಶೌಚಕ್ಕೆ ಹೋದವರಿಗೆ, ಹೊಲದಲ್ಲಿ ಬೇಲಿ ಕಟ್ಟುತ್ತ ಇದ್ದವರ ಮೇಲೆ ಕರಡಿಗಳು ದಾಳಿ ಮಾಡಿದ ಉದಾಹರಣೆಗಳಿವೆ. ಕರಡಿಗಳು ಸಾಮಾನ್ಯವಾಗಿ ಒಬ್ಬಂಟಿಯಾಗಿ ಕಾಡಿನಲ್ಲಿ ಓಡಾಡುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿವೆ. ಅವರ ಮುಖ ಪರಚಿ ಚರ್ಮ ಕಿತ್ತಿದ್ದಿದೆ. ಕಣ್ಣಿನ ಮೇಲೆ ದಾಳಿ ನಡೆಸುತ್ತವೆ. ಕರಡಿ ದಾಳಿಗೊಳಗಾದವರು ಕಾಡಿನಿಂದ ಓಡಿ ಬಂದು ಪ್ರಾಣ ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ. ಇತ್ತೀಚೆಗೆ ಕರಡಿ ದಾಳಿಗೆ ಒಳಗಾದ ರೈತನೊಬ್ಬ ರಕ್ತ ಸೋರುತ್ತ ನಾಲ್ಕು ಕಿಮೀ ನಡೆದು ಜೀವ ರಕ್ಷಿಸಿಕೊಂಡ ದಾರುಣ ಘಟನೆ ನಡೆಯಿತು. ದಾಳಿಗೆ ಒಳಗಾದ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು,ಬಿಡುಗಡೆಯಾದರೂ ಚೇತರಿಸಿಕೊಳ್ಳಲು ವರ್ಷಗಟ್ಟಲೇ ಬೇಕಾಗುತ್ತಿದೆ ಎನ್ನುತ್ತಾರೆ ರೈತರು.ಜೊಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಹಾಗೂ ಹಳಿಯಾಳ ಅರಣ್ಯ ವಿಭಾಗದಲ್ಲಿ ಹೆಚ್ಚಿನ ದಾಳಿಗಳು ನಡೆದಿವೆ. ಅಲ್ಲದೇ ಯಲ್ಲಾಪುರ ಅರಣ್ಯ ವಿಭಾಗದ ಯಲ್ಲಾಪುರ ಹಾಗೂ ಮುಂಡಗೋಡ ಭಾಗದಲ್ಲಿಯೂ ಕರಡಿ ದಾಳಿಗಳು ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಕಾರವಾರ ಜಿಲ್ಲೆಯಲ್ಲಿ ಕರಡಿ ದಾಳಿ ಹೆಚ್ಚಿದೆ. ಕಳೆದ ಮೂರು ತಿಂಗಳಲ್ಲಿ ಮೂರು ತಾಲೂಕುಗಳಲ್ಲಿ ಆರಕ್ಕೂ ಹೆಚ್ಚು ಜನರ ಮೇಲೆ ಕರಡಿಗಳು ದಾಳಿ ನಡೆಸಿ, ಗಾಯಗೊಳಿಸಿವೆ. ಇದರಿಂದ ಕಾಡಿನಲ್ಲಿಯೇ ಬೆಳೆದ ಜೊಯಿಡಾದ ಜನರೂ ಕಾಡಿಗೆ ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net