

ನರೇಗಲ್ಲ: ಅಬ್ಬಿಗೇರಿಯಲ್ಲಿ ಕಳೆದ ತಿಂಗಳು ನಡೆದ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಮಹೋತ್ಸವದಲ್ಲಿ ಜಗದ್ಗುರು ಪೀಠದಿಂದ ಸಾಧನ ಸಿರಿ ಪ್ರಶಸ್ತಿ ಪಡೆದ ಪಟ್ಟಣದ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರನ್ನು ಬೀಚಿ ಬಳಗದಿಂದ ಮಂಗಳವಾರ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ವಾಮೀಜಿ, ‘ನರೇಗಲ್ಲ ಹೋಬಳಿಯಲ್ಲಿ ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆ ನಡೆಸಿಕೊಂಡು ಬರುತ್ತಿರುವ ಬೀಚಿ ಬಳಗವು ಸಾಹಿತ್ಯ ಪ್ರಿಯರ ಮನಸು ಗೆದ್ದಿದೆ’ ಎಂದರು.
ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ, ಅರುಣ ಕುಲಕರ್ಣಿ, ಎಂ. ಎಸ್. ದಢೇಸೂರಮಠ, ಸುರೇಶ ಹಳ್ಳಿಕೇರಿ, ಡಾ. ಆರ್.ಕೆ. ಗಚ್ಚಿನಮಠ, ಎಂ.ಕೆ. ಬೇವಿನಕಟ್ಟಿ, ಭಾರತಿ ಶಿರ್ಸಿ, ನಿರ್ಮಲಾ ಹಿರೇಮಠ ಮಾತನಾಡಿದರು. ಆದರ್ಶ ಕುಲಕರ್ಣಿ, ಹುಚ್ಚೀರಪ್ಪ ಈಟಿ, ಶಿವಯೋಗಿ ಜಕ್ಕಲಿ ಇತರರಿದ್ದರು. ಬಿ.ಬಿ. ಕುರಿ ನಿರೂಪಿಸಿದರು. ಸಂಚಾಲಕ ಈಶ್ವರ ಬೆಟಗೇರಿ ವಂದಿಸಿದರು.