ಪರಧರ್ಮ ಸಹಿಷ್ಣುಗಳಾಗಿ ಬಾಳಿ

7 KMP 01
ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ
Published on

ಕಂಪ್ಲಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶನಿವಾರ ಆಚರಿಸಿದರು.

ಪಟ್ಟಣದ ಮುದ್ದಾಪುರ ರಸ್ತೆಯ ವಿಜಯನಗರ ಕಾಲುವೆ ದಡದ ಖದೀಂ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ, ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂ ಸಾಹೇಬ್ ಸಜ್ಜಾದೆ ನಶೀನ್ (ಪೀಠಾಧಿಪತಿ)ದಿವಾನಖಾನೆ ಆಶೀರ್ವಚನ ನೀಡಿ, ಬಕ್ರೀದ್ ತ್ಯಾಗ, ಬಲಿದಾನದ ಸಂಕೇತವಾದ ಹಬ್ಬವಾಗಿದೆ. ಸರ್ವರೂ ಪ್ರೀತಿ, ವಿಶ್ವಾಸಗಳಿಂದ ಒಂದಾಗಿ ಹಬ್ಬ ಆಚರಿಸಬೇಕು.

ಜಾತಿ, ಧರ್ಮ ತೋರದೆ ಸರ್ವ ಧರ್ಮಿಯರು ಪರಸ್ಪರ ಒಟ್ಟಾಗಿ ಪರಧರ್ಮ ಸಹಿಷ್ಣುಗಳಾಗಿ, ಭಾವೈಕ್ಯದಿಂದ ಹಬ್ಬಗಳನ್ನು ಆಚರಿಸುವಲ್ಲಿ ಮುಂದಾಗಬೇಕು ಎಂದರು. ಖದೀಮ್ ಈದ್ಗಾ(ಸುನ್ನಿ) ಕಮಿಟಿ ಅಧ್ಯಕ್ಷ ಬಿ.ಗೌಸ್‌ಬಾಷಾ, ಪ್ರಮುಖರಾದ ಕೆ.ಮೆಹಬೂಬ್, ಎಂ.ಮೆಹಮೂದ್, ಎಂ.ಶಬ್ಬೀರ್, ಅಬ್ದುಲ್ ವಾಹೀದ್, ಎಂ.ಹರ್ಷದ್, ಎಂ.ಹೊನ್ನೂರವಲಿ, ಗೆಜ್ಜೆಳ್ಳಿಬಾಷಾ, ಎಂ.ಉಸ್ಮಾನ್, ಅಖಾನಿ,ಗನಿಸಾಬ್, ಅಜೀಜ್‌ಸಾಬ್, ಕೆ.ಜಾಹಿದುಲ್ಲಾ, ಬಿ.ಜಾಫರ್ ಇತರರಿದ್ದರು.

ಹೊಸಪೇಟೆ ಬೈಪಾಸ್ ರಸ್ತೆಯ ಈದ್ಗಾ ಮೈದಾನದಲ್ಲಿಯೂ ಬಕ್ರೀದ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಜರುಗಿತು. ಸಿರಾಜ್ ಹಾಫಿಸಾಬ್, ಹಾಜಿ ಜಿಯಾವುದ್ದೀನ್ ಸೇರಿ ಕಂಪ್ಲಿ ಕೋಟೆಯ ಮಸೀದಿಗಳ ಮುತುವಲ್ಲಿಗಳು, ಈದ್ಗಾ ಕಮಿಟಿಯ ಪದಾಧಿಕಾರಿಗಳು, ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net