ಸ್ವ ಉದ್ಯೋಗ ಕೈಗೊಂಡು ಯಶಸ್ವಿ ಜೀವನ ನಡೆಸಿ

kmg huccheshwar
ಕಮತಗಿ ಪಟ್ಟಣದ ಕೇತೇಶ್ವರ ಮಂಗಲ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿದರು. ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯರು, ಮೇದಾರ ಗುರುಪೀಠದ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ, ಮುರುಗೇಶ ಕಡ್ಲಿಮಟ್ಟಿ, ಎಸ್.ಎಸ್. ಮಂಕಣಿ ಇತರರಿದ್ದರು.
Published on

ಕಮತಗಿ: ಇಂದಿನ ತಂತ್ರಜ್ಞಾನ, ಆಧುನೀಕರಣ ಕಾಲಘಟ್ಟದಲ್ಲಿ ಶಿಕ್ಷಣ ಕಲಿತ ಎಲ್ಲರಿಗೂ ಸರ್ಕಾರದ ಕೆಲಸ ಸಿಗುವುದು ಕಷ್ಟ. ನೀವೆ ವಿಶೇಷ ಕೌಶಲದೊಂದಿಗೆ ಸ್ವಂತ ಉದ್ಯೋಗ ಆರಂಭಿಸಿ ಯಶಸ್ವಿ ಜೀವನ ನಡೆಸಬೇಕೆಂದು ಕಮತಗಿ-ಕೋಟೆಕಲ್ಲ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಶಿವಶರಣ ಮೇದಾರ ಕೇತಯ್ಯನವರ ಗಿರಿಜನಾಂಗದ ಅಭಿವೃದ್ಧಿ ಸಂಘದಿಂದ ಕೇತೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಗೌರಿ ಕೇತೇಶ್ವರ ದೇವಸ್ಥಾನದ 36ನೇ ವಾರ್ಷಿಕೋತ್ಸವ, ಉಚಿತ ಸಾಮೂಹಿಕ ವಿವಾಹ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದಿಲ್ಲ. ನಮ್ಮ ದುಡಿಮೆಯಲ್ಲಿ ನಾವು ಬದುಕುವ ಸ್ವಾಭಿಮಾನಿ ಜೀವನವನ್ನು ಕರಗತ ಮಾಡಿಕೊಳ್ಳಬೇಕಿದೆ. ಶ್ರದ್ಧೆ, ಭಕ್ತಿ, ನಿಷ್ಠೆಯಿಂದ ಜೀವನ ಸಾಗಿಸಬೇಕು. ನಾವು ಮಾಡುವ ಕೆಲಸದ ಬಗ್ಗೆ ಗೌರವ, ಪ್ರೀತಿ ಇರಬೇಕು ಎಂದರು.

ಉಪತಹಸೀಲ್ದಾರ್ ಜಗದೀಶ ಜೈನಾಪುರ ಮಾತನಾಡಿ, ಬಿದಿರಿನ ವಿನ್ಯಾಸ ಕಾಯಕದಲ್ಲಿ ತೊಡಗಿಕೊಳ್ಳುವ ಮೇದಾರ ಜನರಿಗೆ ಕೌಶಲಾಭಿವೃದ್ಧಿ ಇಲಾಖೆಯಿಂದ ವಿವಿಧ ಕಲೆಗಳ ಬಗ್ಗೆ ತರಬೇತಿ ನೀಡುತ್ತಿದ್ದು, ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ಮೇದಾರ ಗುರುಪೀಠದ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಪಾರ್ವತಿ-ಪರಮೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಸ್. ಮಂಕಣಿ, ದೇವಾಂಗ ಸಮಾಜದ ಅಧ್ಯಕ್ಷ ಪಾಂಡುರಂಗ ಹೋಟಿ, ಪಪಂ ಮುಖ್ಯಾಧಿಕಾರಿ ಎ್.ಎನ್. ಹುಲ್ಲಿಕೇರಿ, ವಿರೇಶ್ವರಸ್ವಾಮಿ ಹಿರೇಮಠ, ಬಸಯ್ಯಸ್ವಾಮಿ ಹಿರೇಮಠ, ಬಳ್ಳಾರಿಯ ಹನುಮಂತ ಮೇದಾರ, ಮಲ್ಲಪ್ಪ ಮೇದಾರ, ಸದಾಶಿವ ಮೇದಾರ, ರಮೇಶ ಗರುಡ, ಗುರುನಾಥ ಮಹೇಂದ್ರ ಇತರರಿದ್ದರು.
ಶ್ರೀನಿವಾಸ ಐಹೊಳ್ಳಿ ಪ್ರಾರ್ಥಿಸಿದರು. ಶಿಕ್ಷಕರಾದ ಬಿ.ಬಿ. ಸಿಂಗದ, ಪ್ರಕಾಶ ಅಚನೂರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net