ಲಿಂಗಾಯತ ಧರ್ಮದ ಬಗ್ಗೆ ಅಭಿಮಾನವಿರಲಿ

Be proud of the Lingayat religion.
ಹುನಗುಂದದ ಬಸವ ಮಂಟಪದಲ್ಲಿ ಆಯೋಜಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆ ಕಾರ್ಯಕ್ರಮವನ್ನು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಅಶೋಕ ಬರಗುಂಡಿ ಉದ್ಘಾಟಿಸಿದರು. ಗುರುಮಹಾಂತ ಸ್ವಾಮಿಗಳು, ಬಸವಲಿಂಗ ಮಹಾಸ್ವಾಮಿಗಳು ಮತ್ತಿತರರಿದ್ದಾರೆ.
Published on

ಹುನಗುಂದ: ಬಸವಣ್ಣನವರ ಬಗ್ಗೆ ಗೌರವ, ಇಷ್ಟಲಿಂಗದ ಬಗ್ಗೆ ನಿಷ್ಠೆ ಹಾಗೂ ಲಿಂಗಾಯತ ಧರ್ಮದ ಬಗ್ಗೆ ಅಭಿಮಾನ ಹೊಂದುವುದರ ಜತೆಗೆ ವಚನಗಳು ನಮ್ಮ ಧರ್ಮಗ್ರಂಥಗಳು ಎಂಬುದನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆ, ತಾಲೂಕು ಘಟಕ ಉದ್ಘಾಟನೆ ಹಾಗೂ ವಚನ ದರ್ಶನ ಮಿಥ್ಯ-ಸತ್ಯ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನಾವು ಲಿಂಗಾಯತರಾಗಿ ಉಳಿಯಬೇಕೆಂದರೆ ಲಿಂಗಾಯತ ಧರ್ಮದ ಆಚರಣೆಗೆ ಧೈರ್ಯ ತೋರಿಸಬೇಕು. ಲಿಂಗಾಯತರು ಇಷ್ಟ ಲಿಂಗಪೂಜೆ ಮಾಡಿಕೊಂಡು ಬಸವಣ್ಣನವರ ಐದು ನಿತ್ಯ ವಚನಗಳನ್ನು ಓದಬೇಕು. ಕಾಯಕದಲ್ಲಿ ವಂಚನೆ ಮಾಡದೆ ನಿಷ್ಠೆ ತೋರಿಸಬೇಕು. ಬಸವವಣ್ಣನವರು ಕೊರಳಲ್ಲಿ ಲಿಂಗ ಹಾಕಿಕೊಂಡವರು ಜೋತಿಷ್ಯ ಕೇಳಬಾರದು, ಮೂರ್ತಿಪೂಜೆ ಮಾಡಬಾರದು ಎಂದು ತಿಳಿಸಿದ್ದರು ಅದನ್ನು ಪಾಲಿಸುತ್ತಿಲ್ಲ. ಲಿಂಗವನ್ನು ಕಟ್ಟಿಕೊಂಡವರು ಎಲ್ಲರೂ ಲಿಂಗಾಯತರು. ಲಿಂಗಾಯತ ಧರ್ಮ ಉಳಿಯಲು ಧರ್ಮದ ಬಗ್ಗೆ ಅಭಿಮಾನ ಪ್ರಜ್ಞೆ ಬರಲಿ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಅಶೋಕ ಬರಗುಂಡಿ ಮಾತನಾಡಿದರು. ಶಿರೂರಿನ ಬಸವಲಿಂಗ ಮಹಾಸ್ವಾಮಿಗಳು, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಆರ್. ಕಡಿವಾಲ, ಉಪಾಧ್ಯಕ್ಷ ಬಸವರಾಜ ಕಡಪಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಯಡಹಳ್ಳಿ, ನಾಗರತ್ನ ಭಾವಿಕಟ್ಟಿ, ಮಹಾಂತೇಶ ಪರೂತಿ ಮತ್ತಿತರರಿದ್ದರು. ಶಿಕ್ಷಕ ಸಂಗಮೇಶ ಹೊದ್ಲೂರ ನಿರೂಪಿಸಿದರು, ನಿವೃತ್ತ ಶಿಕ್ಷಕ ಎಂ.ಎಸ್.ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net