

ಹಾನಗಲ್ಲ: ಆಡಳಿತ ವಿಕೇಂದ್ರೀಕರಣದ ಕಸನು ನನಸಾಗಬೇಕಿದ್ದು, ಗ್ರಾಪಂಗಳು ಸ್ಥಳೀಯ ಸರ್ಕಾರವಾಗಿ ಪರಿವರ್ತನೆಯಾಗಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಕ್ರಿಯಾಶೀಲರಾಗಿ ಜವಾಬ್ದಾರಿಯಿಂದ ಮತ್ತು ಪಾರದರ್ಶಕವಾದ ಆಡಳಿತ ನೀಡಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಮಂಗಳವಾರ ತಾಲೂಕಿನ 42 ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷ-ಉಪಾಧ್ಯಕ್ಷರು, ಪಿಡಿಒ, ಉದ್ಯೋಗ ಖಾತ್ರಿ ಇಂಜಿನಿಯರರ ಸಭೆ ನಡೆಸಿ ಅವರು ಮಾತನಾಡಿದರು. ಸ್ಥಳೀಯ ಸಂಸ್ಥೆಗಳು ಸಬಲೀಕರಣಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಿದೆ. ಸಭೆಗಳ ಪ್ರಾಮುಖ್ಯತೆ, ಯೋಜನೆಗಳ ಕುರಿತು ಮಾಹಿತಿ, ಬದಲಾದ ನಿಯಮ, ಕಾನೂನುಗಳ ಬಗೆಗೆ ಮಾಹಿತಿ ಪಡೆದುಕೊಂಡು ಆಡಳಿತ ನಿರ್ವಹಿಸಬೇಕು. ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕಾಳಜಿ ವಹಿಸಿದರೆ ಗ್ರಾಮಾಭಿವೃದ್ಧಿಗೆ ಅರ್ಥ ಬರುತ್ತದೆ. ಅಧ್ಯಕ್ಷ, ಉಪಾಧ್ಯಕ್ಷರಾಗುವ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತದೆ. ಇಂಥ ಅವಕಾಶ ಸದ್ಬಳಕೆ ಮಾಡಿಕೊಂಡು ಜನರ ಮನಸ್ಸಿನಲ್ಲಿ ಉಳಿಯುವಂತೆ ಜನಪರ ಆಡಳಿತ ನೀಡಬೇಕು ಎಂದರು.
ಬಹುತೇಕ ಗ್ರಾಮಗಳಲ್ಲಿ ಹಗಲಿನಲ್ಲಿಯೂ ಬೀದಿದೀಪಗಳು ಉರಿಯುತ್ತಿವೆ. ಪ್ರತಿ ಗ್ರಾಪಂಗಳೂ ಸಹ ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಲಭಿಸುತ್ತಿರುವ ಅನುದಾನ ವಿದ್ಯುತ್ ಬಿಲ್ಗೆ ಪಾವತಿಯಾಗುತ್ತಿದೆ. ಆಗಸ್ಟ್ ತಿಂಗಳ ಒಳಗಾಗಿ ಈ ವ್ಯವಸ್ಥೆ ಸರಿಯಾಗಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ಶಾಸಕ ಮಾನೆ ಎಚ್ಚರಿಸಿದರು.
ಪ್ರತಿದಿನ ಕನಿ?್ಟ ಒಂದು ತಾಸು ಗ್ರಾಮಗಳಲ್ಲಿ ಸಂಚರಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ. ಎಸ್.ಸಿ.ಪಿ., ಟಿ.ಎಸ್.ಪಿ., ಅಲ್ಪಸಂಖ್ಯಾತ ಮತ್ತು ಸಾಮಾನ್ಯ ವರ್ಗದ ಜನ ವಾಸಿಸುವ ಕಾಲೋನಿಗಳಲ್ಲಿ ರಸ್ತೆ ಅಭಿವೃದ್ಧಿ ಪಡಿಸಲು ಯೋಜನೆ ಸಿದ್ಧಪಡಿಸಿ. ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳನ್ನು ಸೃಜಿಸಿ, ಕ್ರಿಯಾಯೋಜನೆ ಮಾಡಿಟ್ಟುಕೊಳ್ಳಿ. ಸರ್ಕಾರ ಸಾಕ?್ಟು ಅಧಿಕಾರ ಕೊಟ್ಟಿದ್ದು, ಜನರ ಹಿತಕ್ಕೆ ಸಮರ್ಥವಾಗಿ ಚಲಾಯಿಸಿ ಎಂದು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರಿಗೆ ಇದೇ ಸಂದರ್ಭದಲ್ಲಿ ]ೕನಿವಾಸ ಮಾನೆ ಕಿವಿಮಾತು ಹೇಳಿದರು. ತಾಪಂ ಇಒ ಎಂ.ಕೆ.ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಹೆಸ್ಕಾಂ ಇಇ ಕೃ?್ಣಪ್ಪ, ಎಇಇ ಆನಂದ ಸೇರಿ ಇತರರು ಉಪಸ್ಥಿತರಿದ್ದರು.
ಪಿಡಿಒಗಳಿಗೆ ಎಚ್ಚರಿಕೆ
ಪ್ರತಿ ಗ್ರಾಪಂಗಳೂ ಸಹ 50ರಿಂದ 60 ಲಕ್ಷದಷ್ಟು ತೆರಿಗೆ ಬಾಕಿ ಉಳಿಸಿಕೊಂಡಿವೆ. ಇದರಿಂದ ಸಾರ್ವಜನಿಕರಿಗೆ ಮೂಲಸೌಲಭ್ಯ ಕಲ್ಪಿಸಲು ಹಿನ್ನಡೆಯಾಗುತ್ತಿದೆ. ಕೂಡಲೇ ಗ್ರಾಪಂ ಸಭೆ ಕರೆದು ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ವಾರ್ಡ್ ಸಭೆ ನಡೆಸಿ, ಕರ ಭರಿಸುವ ಅಗತ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ. ಕರ ವಸೂಲಿಯಾದರೆ ಸಮರ್ಪಕ ಕುಡಿಯುವ ನೀರು ಪೂರೈಕೆ, ಕಸ ವಿಲೇವಾರಿ, ಬೀದಿದೀಪ ನಿರ್ವಹಣೆಗೆ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಿ. ವಾರ್ಡ್ ವಿಸಿಟ್ ಮಾಡುವಂತೆ ಪಿಡಿಒಗಳಿಗೆ ನೀಡಿರುವ ಸೂಚನೆ ಪಾಲನೆಯಾಗುತ್ತಿಲ್ಲ. ಮಹಿಳಾ ಸಭೆಗಳು, ಮಕ್ಕಳ ಸಭೆಗಳು, ಗ್ರಾಮಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಕರ ವಸೂಲಿಗೂ ಗಮನ ನೀಡುತ್ತಿಲ್ಲ. ಹೀಗಾಗದಂತೆ ಪಿಡಿಒಗಳು ಕಾಳಜಿ ವಹಿಸಬೇಕು. ಪದೇ ಪದೆ ಇದನ್ನೇ ಹೇಳಿಸಿಕೊಳ್ಳಬೇಡಿ. ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿ. ಇಲ್ಲದಿದ್ದರೆ ಕ್ರಮ ಎದುರಿಸಬೇಕು ಎಂದು ಶಾಸಕ ಮಾನೆ ಎಚ್ಚರಿಸಿದರು.