ಸಮಾಜದ ಹಿತ ಕಾಯಲು ತ್ಯಾಗ, ಬಲಿದಾನಕ್ಕೂ ಸಿದ್ಧರಾಗಿ

mbl 24-1 udgatane
ಮುದ್ದೇಬಿಹಾಳದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಸಮಾರಂಭವನ್ನು ಶಾಸಕ ಸಿ.ಎಸ್. ನಾಡಗೌಡ ಉದ್ಘಾಟಿಸಿದರು. ಸಿದ್ಧಲಿಂಗ ಶಿವಾಚಾರ್ಯರು, ಅಮರೇಶ್ವರ ದೇವರು, ದಾನಯ್ಯಸ್ವಾಮಿ ಹಿರೇಮಠ, ಸೋಮನಗೌಡ ಪಾಟೀಲ ನಡಹಳ್ಳಿ, ಪ್ರಭುಗೌಡ ದೇಸಾಯಿ, ಶಾಂತಗೌಡ ಪಾಟೀಲ ನಡಹಳ್ಳಿ, ಪ್ರಭುದೇವ ಕಲಬುರ್ಗಿ, ವಿಜಯಲಕ್ಷ್ಮೀ ಬೂದಿಹಾಳಮಠ ಇತರರಿದ್ದರು.
Published on

ಮುದ್ದೇಬಿಹಾಳ: ಸಮಾಜ ಕಟ್ಟುವ ವಿಷಯ ಬಂದಾಗ ಎಲ್ಲರೂ ಒಂದಾಗಿ ಸಮಾಜದ ಹಿತ ಕಾಯಲು ಯಾವುದೇ ತ್ಯಾಗ, ಬಲಿದಾನಕ್ಕೂ ಸಿದ್ಧರಾಗಿರಬೇಕೆಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.

ಪಟ್ಟಣದ ಜಗದ್ಗುರು ರೇಣುಕಾಚಾರ್ಯರ ನಿಯೋಜಿತ ದೇವಸ್ಥಾನ ಆವರಣದಲ್ಲಿ ತಾಲೂಕು ಜಂಗಮ ಸಮಾಜದಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ಶ್ರೀ ಆದಿಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಸೌಲಭ್ಯಕ್ಕಾಗಿ ಅನೇಕರು ಜಾತಿ ಕಲಾಂನಲ್ಲಿ ವೀರಶೈವ, ಲಿಂಗಾಯತ ಎಂದು ಬರೆಸುವ ಬದಲು ತಮ್ಮ ಉಪಜಾತಿಗಳನ್ನು ಬರೆಸುತ್ತಿದ್ದಾರೆ. ಇದರಿಂದಾಗಿ ವೀರಶೈವ ಲಿಂಗಾಯತ ಸಮಾಜ ಕ್ಷೀಣಿಸತೊಡಗಿದೆ. ಜನಗಣತಿಯಲ್ಲಿ ಮೂರನೇ ಸ್ಥಾನಕ್ಕೆ ಬಂದು ನಿಂತಿದ್ದೇವೆ. ವೀರಶೈವ ಲಿಂಗಾಯತರು ಇದರ ಬಗ್ಗೆ ಆಲೋಚಿಸಬೇಕು ಎಂದರು.

ಸರ್ಕಾರ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ಜಾರಿಗೊಳಿಸಿದ್ದಕ್ಕೆ ನಮ್ಮ ತಕರಾರಿಲ್ಲ. ನಾವು ಬೇರೆ ಸಮಾಜ, ಜಾತಿ, ಧರ್ಮಗಳಿಗೆ ತೊಂದರೆ ಕೊಡುವ ಉದ್ದೇಶ ಹೊಂದಿರಬಾರದು. ಆದರೆ, ನಮ್ಮ ಒಗ್ಗಟ್ಟಿನ ವಿಷಯ ಬಂದಾಗ ನಾವೆಲ್ಲ ಸಂಘಟಿತರಾಗಬೇಕು. ವ್ಯಸನಕ್ಕೆ ಅಂಟಿಕೊಳ್ಳುತ್ತಿರುವ ಯುವಪೀಳಿಗೆಯನ್ನು ಸರಿದಾರಿಗೆ ತಂದು ಶಿಕ್ಷಣದ ಕಡೆಗೆ ಅಭಿರುಚಿ ಬೆಳೆಸಬೇಕು ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಸಾನ್ನಿಧ್ಯ ವಹಿಸಿದ್ದ ಬಿಲ್‌ಕೆರೂರು ಬಿಲ್ವಾಶ್ರಮ ಹಿರೇಮಠ ಸಿದ್ಧಲಿಂಗ ಶಿವಾಚಾರ್ಯರು, ಮುದ್ದೇಬಿಹಾಳ ಹೊಸಮಠದ ಅಮರೇಶ್ವರ ದೇವರು ಮಾತನಾಡಿದರು.

ಸಮಾಜದ ಅಧ್ಯಕ್ಷ ದಾನಯ್ಯಸ್ವಾಮಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ಸೋಮನಗೌಡ ಪಾಟೀಲ ನಡಹಳ್ಳಿ ಅವರು ಜಗದ್ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ನಿರ್ದೇಶಕಿ ವಿಜಯಲಕ್ಷ್ಮೀ ಬೂದಿಹಾಳಮಠ, ಸಮಾಜ ಕಲ್ಯಾಣಾಧಿಕಾರಿ ಬಸಂತಿ ಮಠ, ಸಿಟಿ ಸರ್ವೇಯರ್ ಶೈಲಶ್ರೀ ಹಿರೇಮಠ, ಜಂಗಮ ಸಮಾಜದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ತೆಗ್ಗಿನಮಠ, ಗಣ್ಯರಾದ ಸಿದ್ಧಲಿಂಗಯ್ಯ ಕಲ್ಯಾಣಮಠ, ಪ್ರಭುದೇವ ಕಲಬುರ್ಗಿ, ಸಂಗನಗೌಡ ಬಿರಾದಾರ(ಜಿಟಿಸಿ), ಗೌರಮ್ಮ ಶಿವಯೋಗಿಮಠ, ನೀಲಮ್ಮ ವಿರಕ್ತಮಠ, ಮಹಾಂತೇಶ ಬೂದಿಹಾಳಮಠ, ಶ್ರೀಕಾಂತ ಹಿರೇಮಠ, ಅರವಿಂದ ಇತರರಿದ್ದರು.

ಹಿರಿಯ ಸಾಹಿತಿ ಪ್ರೊ. ಬಿ.ಎಂ. ಹಿರೇಮಠ, ರಾಚಯ್ಯ ಹಿರೇಮಠ, ರಾಜಶೇಖರ ಕಲ್ಯಾಣಮಠ, ವಕೀಲ ವಿ.ಎಸ್. ಸಾಲಿಮಠ, ಆರ್.ಐ.ಹಿರೇಮಠ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಅಂಜಲಿ ಹಿರೇಮಠ, ಸೌಜನ್ಯ ಹಿರೇಮಠ, ಸೃಷ್ಟಿ ಹಿರೇಮಠ, ಸ್ಫೂರ್ತಿ ತೆಗ್ಗಿನಮಠ ಅವರನ್ನು ಸನ್ಮಾನಿಸಲಾಯಿತು.

ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಬಸಯ್ಯ ಹಿರೇಮಠ ಸ್ವಾಗತಿಸಿದರು. ವಾಗೀಶ ಹಿರೇಮಠ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಜಗದ್ಗುರು ಶ್ರೀ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಬಾಲಕಿ ಶ್ರಾವಣಿ ಮಹಾಂತೇಶ ಮಠಪತಿ ರೇಣುಕಾಚಾರ್ಯರ ಛದ್ಮವೇಷಧಾರಿಯಾಗಿ ಶಿವಲಿಂಗದ ಎದುರು ನಿಂತು ಗಮನಸೆಳೆದಳು.

ಸರ್ಕಾರ ಏಪ್ರೀಲ್, ಮೇ ತಿಂಗಳಲ್ಲಿ ಶಾಸಕರ ನಿಧಿಗೆ ಅನುದಾನ ನೀಡಲಿದ್ದು, ಮುದ್ದೇಬಿಹಾಳದ ರೇಣುಕಾಚಾರ್ಯರ ದೇವಸ್ಥಾನ ನಿರ್ಮಾಣಕ್ಕೆ 25 ಲಕ್ಷ ರೂ. ಆರ್ಥಿಕ ನೆರವು ನೀಡುತ್ತೇನೆ.

| ಸಿ.ಎಸ್. ನಾಡಗೌಡ ಅಪ್ಪಾಜಿ, ಶಾಸಕರು, ಕೆಎಸ್‌ಡಿ ನಿಗಮದ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net