

ಕಂಪ್ಲಿ: ಮಾನಸಿಕ ಆರೋಗ್ಯ ಹೊಂದಲು ಧನಾತ್ಮಕ ಆಲೋಚನೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಬಳ್ಳಾರಿಯ ಜೆಸಿಐ ವಲಯ 24ರ ತರಬೇತುಗಾರ್ತಿ ಟಿ.ಎಲ್.ಶಾರದಾಪ್ರಿಯ ಪಿಲ್ಲೈ ಹೇಳಿದರು.
ಇಲ್ಲಿನ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಜೆಸಿಐ ಕಂಪ್ಲಿ ಸೋನಾ ಹಮ್ಮಿಕೊಂಡಿದ್ದ ಧನಾತ್ಮಕ ಆಲೋಚನೆ ಜಾಗೃತಿ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಧನಾತ್ಮಕ ಚಿಂತನೆಯು ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಜೊತೆಗೆ ನಕಾರಾತ್ಮಕ ಆಲೋಚನೆಗಳನ್ನು ನಿಗ್ರಹಿಸುತ್ತದೆ.
ಉನ್ನತ ಸಾಧನೆಗಾಗಿ ವಿದ್ಯಾರ್ಥಿಯು ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳುವಲ್ಲಿ ಜಾಗೃತಿ ವಹಿಸಬೇಕು ಎಂದರು.