ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ ಇರಲಿ

Be loyal and honest at work.
ತಾಳಿಕೋಟೆ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಎಚ್​. ಬೀಳಗಿ ಅವರನ್ನು ಸನ್ಮಾನಿಸಲಾಯಿತು. ಅರವಿಂದ ಹೂಗಾರ, ಎಚ್​. ವೈ. ಮಸರಕಲ್ಲ, ಲಾಲಬಿ ಎಂ. ಬೀಳಗಿ, ರಾಜು ರುದ್ರವಾಡಿ ಇತರರಿದ್ದರು.
Published on

ತಾಳಿಕೋಟೆ: ಸರ್ಕಾರಿ ನೌಕರರಿಗೆ ಸೇವಾ ನಿವೃತ್ತಿ ಎಂಬುದು ಸಹಜ ಪ್ರಕ್ರಿಯೆ. ಆದರೆ, ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ ಅಡಗಿದ್ದರೆ ಗೌರವ ತಾನಾಗಿಯೇ ಹುಡುಕಿಕೊಂಡು ಬರಲಿದೆ ಎಂದು ಜಿಲ್ಲಾ ನೌಕರರ ಸಂದ ಅಧ್ಯ ಅರವಿಂದ ಹೂಗಾರ ಹೇಳಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಎಚ್​. ಬೀಳಗಿ ಅವರಿಗೆ ಶನಿವಾರ ಏರ್ಪಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಲಾಖೆಯಲ್ಲಿ 38 ವರ್ಷಗಳವರೆಗೆ ಸುಧೀರ್ ಸೇವೆ ಸಲ್ಲಿಸಿದ ಎಂ.ಎಚ್​.ಬೀಳಗಿ ಅವರು ಅಭಿಮಾನ ಪಡುವ ರೀತಿಯಲ್ಲಿ ಸೇವೆ ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದು, ಅವರ ವಿಶ್ರಾಂತ ಬದುಕು ಸುಖಕರವಾಗಿರಲೆಂದು ಹಾರೈಸಿದರು.

ನಿವೃತ್ತ ಕೃಷಿ ಅಧಿಕಾರಿ ಎಚ್​. ವೈ. ಮಸರಕಲ್ಲ ಮಾತನಾಡಿ, ಎಂ.ಎಚ್​.ಬೀಳಗಿ ಅವರ ಆದರ್ಶ ಬದುಕು ಹಾಗೂ ಸೇವಾ ನಿಷ್ಠೆ ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದರು. ಭಾಗವಾನ ಬ್ಯಾಂಕ್​ ಅಧ್ಯ ಎಸ್​.ಎ. ನಾಲಬಂದ ಮಾತನಾಡಿದರು.

ನಿವೃತ್ತ ಕೃಷಿ ಅಧಿಕಾರಿ ಬೀಳಗಿ ಅವರನ್ನು ಇಲಾಖೆ ವತಿಯಿಂದ ಹಾಗೂ ವಿವಿಧ ಸಂ&ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

ನಿವೃತ್ತ ಕೃಷಿ ಅಧಿಕಾರಿ ಎಂ.ಎಚ್​. ಬೀಳಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಿವೃತ್ತ ಶಿಕಿ ಲಾಲಬಿ ಎಂ. ಬೀಳಗಿ, ರಾಜು ರುದ್ರವಾಡಿ, ಸಂಗಮೇಶ ಪಾಟೀಲ, ಲತ್​ೀ ಬೀಳಗಿ, ಎಂ. ಎಸ್​. ಖಾಜಿ, ಎಂ.ಎಸ್​. ಕೋರವಾರ, ಎನ್​.ಎ. ಖಾಜಿ, ಆಸೀಫ್​ ಬೀಳಗಿ, ಬಾಗವಾನ ಜಮಾತ್​ ಅಧ್ಯ ಸದ್ದಾಂ ಬೀಳಗಿ, ಕೊಹಿನೂರ ಸಂದ ಅಧ್ಯ ಕಾಸೀಮಸಾಬ ಜಕಾತಿ, ಅಬ್ಬಾಸಲಿ ನಿಡಗುಂದಿ, ಮೈನು ಕೊರ್ತಿ, ಆದಮಸಾಬ ಢಾಲಾಯತ್​ ಇತರರಿದ್ದರು. ಕೃಷಿ ಅಧಿಕಾರಿ ಮಹೇಶ ಜೋಶಿ ನಿರೂಪಿಸಿದರು. ಸಂಗಮೇಶ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net