ಸಮುದಾಯ ಭವನ ಸದುಪಯೋಗವಾಗಲಿ

5Raibag1
Published on

ರಾಯಬಾಗ: ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ದೇವಸ್ಥಾನಗಳಿಗೆ ಸಮುದಾಯ ಭವನ ನಿರ್ಮಿಸಿ ಕೊಡಲಾಗುತ್ತಿದೆ. ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ನಾಗರಾಳ ಗ್ರಾಮದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಹಾಗೂ ಜಿಪಂ ಇಲಾಖೆ ಯೋಜನೆಯಡಿ 5 ಲಕ್ಷ ರೂ. ಮೊತ್ತದಲ್ಲಿ ಬ್ರಹ್ಮದೇವರ ದೇವಸ್ಥಾನದ ಸಮುದಾಯ ಭವನ ಹಾಗೂ 5 ಲಕ್ಷ ರೂ. ವೆಚ್ಚದಲ್ಲಿ ರೇಣುಕಾದೇವಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಭೀಮು ಮುಧೋಳೆ, ಭರಮಾ ಚೌಗಲಾ, ಅಪ್ಪಾಸಾಹೇಬ ಕೆಂಗನ್ನವರ, ಬಸಪ್ಪ ಚೌಗಲಾ, ಮುರಗೆಪ್ಪ ವನಜೋಳೆ, ರಾಜು ಚೌಗಲಾ, ಶಿವಾನಂದ ಚೌಗಲಾ, ಸತ್ಯಪ್ಪ ದಾವಣೆ, ಪರಶುರಾಮ ಚೌಗಲಾ, ಚಿದಾನಂದ ಮುಧೋಳೆ, ಚಿದಾನಂದ ಚೌಗಲಾ, ಸಂಜು ಮಗದುಮ್, ಪಾಂಡು ಹೊಸಕೋಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net