

ಬೆಳಗಾವಿ: ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿಯೇ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಶೇಖ್ ಕಾಲೇಜ್ ಆ್ ಎಜುಕೇಶನ್ (ಬಿ.ಇಡಿ) ಪ್ರಾಂಶುಪಾಲ ಡಾ.ಐ.ಪಿ. ಸುತಾರ ತಿಳಿಸಿದರು.
ನೆಹರು ನಗರದ ಶೇಖ್ ಕ್ಯಾಂಪಸ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಜ್ಯ ಕಾಲೇಜು ಗಾಯನ ಮತ್ತು ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು. ಕೇವಲ ಪಠ್ಯಪುಸ್ತಕಗಳ ಕಲಿಕೆಗೆ ಸೀಮಿತವಾಗಬಾರದು ಎಂದರು.
ಗಾಯನ ಜಿಎಸ್‌ಎಸ್ ಕಾಲೇಜು ತಂಡ ಪ್ರಥಮ, ಪೀಪಲ್ಸ್ ಟ್ರೀ ಕಾಲೇಜು ತಂಡ ದ್ವಿತೀಯ ಹಾಗೂ ಬಿ.ಕೆ.ಕಾಲೇಜು ತೃತೀಯ ಬಹುಮಾನ ಪಡೆಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಸಮಿತಿ ಕಾಲೇಜಿನ ತಂಡ ಪ್ರಥಮ ಮತ್ತು ಪೀಪಲ್ಸ್ ಟ್ರೀ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡವು. ಮುಖ್ಯ ಅತಿಥಿಯಾಗಿ ಬಶೀರ್ ಶೇಖ್ ಆಗಮಿಸಿದ್ದರು. ವಿನಾಯಕ ಮೋರೆ, ಉಷಾ ಡಿ.ಬಿ.ಹಾಗೂ ವಿದ್ಯಾರ್ಥಿಗಳು ಇದ್ದರು.