

ಸಂಕೇಶ್ವರ: ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಸುಧಾರಣೆಯಾದಾಗ ಮಾತ್ರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡಲು ಸಾಧ್ಯ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಸಮೀಪದ ನಿಡಸೋಸಿ ಗ್ರಾಮದಲ್ಲಿ 64 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ವಿವಿಧ ಕಟ್ಟಡಗಳ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದು ಆತಂಕಕಾರಿ ವಿಷಯ. ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಶಿಕ್ಷಕರು ಸಜ್ಜಾಗಬೇಕು. ಶಿಕ್ಷಣಕ್ಕಾಗಿ ಸರ್ಕಾರ ನೀಡುತ್ತಿರುವ ಅನುದಾನ ಸಮಪರ್ಕವಾಗಿ ಸದ್ಬಳಕೆಯಾದಲ್ಲಿ ಮಾತ್ರ ಭವಿಷ್ಯದ ಪೀಳಿಗೆಯ ಜೀವನ ಉಜ್ವಲವಾಗಲಿದೆ ಎಂದರು.
19 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಅಡುಗೆ ಕೋಣೆ, 28 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ 2 ಕೊಠಡಿ, 17 ಲಕ್ಷ ರೂ.ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ಉದ್ಘಾಟಿಸಿದರು.
ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ದುಂಡಪ್ಪ ಹೆದ್ದೂರಿ, ಅಶೋಕ ಪಟ್ಟಣಶೆಟ್ಟಿ, ಸತ್ಯಪ್ಪ ನಾಯಿಕ, ಪ್ರಶಾಂತ ಪಾಟೀಲ, ಗಿರೀಶ ಪಾಟೀಲ, ಮಂಗಲ ಪಾಂಡವ, ಸುಭಾಷ ಪಾಟೀಲ, ಶಿವಾನಂದ ಕರೋಶಿ, ಉಮೇಶ ಪಾಟೀಲ, ಬಿ.ಎಸ್.ಸನದಿ, ಎ.ಎಸ್. ಪಾಟೀಲ, ಗಜಾನನ ಬಾಡ, ಶಾಂತಿನಾಥ ಖಾನಾಪೂರಿ, ರುದ್ರಪ್ಪ ಡೊಣಗಿ, ಸಂತೋಷ ಬಾಡ, ಪಾರ್ವತಿ ಮಠದ, ನಿಜಲಿಂಗ ಹೂಗಾರ, ಶೋಭಾ ಬಡಕುಂದ್ರಿ, ವಿರೂಪಾಕ್ಷಿ ಚೌಗಲಾ, ವಿಶ್ವನಾಥ ಕಮತೆ ಇತರರಿದ್ದರು.