ಶಿಕ್ಷಣದೊಂದಿಗೆ ಸಂಸ್ಕಾರವೂ ಇರಲಿ

3
ಕುಡಚಿ ಪಟ್ಟಣದ ಸನ್‌ಶೈನ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಡಾ.ಪ್ರಕಾಶ ಜೈನ ಬಡಜಾತಿಯಾ ಉದ್ಘಾಟಿಸಿದರು. ಪ್ರಮೋದ ಬಾಲೋಜಿ, ಪ್ರವೀಣ ರತ್ತು, ಡಾ.ಸಚಿನ ಮನಗುತ್ತಿ, ಪ್ರತಿಭಾ ಚಿಕ್ಕಬೀರೆ, ಶಾಂತಿನಾಥ ಹಂಜೆ, ಎ.ಐ.ಬಾಗಿ ಇತರರಿದ್ದರು.
Published on

ಕುಡಚಿ: ಉತ್ತಮ ನಾಗರಿಕರಾಗಲು ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕು ಎಂದು ಡಾ.ಪ್ರಕಾಶ ಜೈನ ಬಡಜಾತಿಯಾ ಹೇಳಿದರು.

ಪಟ್ಟಣದ ಶಾಂತಿಸಾಗರ ಶಿಕ್ಷಣ ಸಂಸ್ಥೆಯ ಸನ್‌ಶೈನ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾತೃಭಾಷೆ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದರು.

ನಿವೃತ್ತ ಶಿಕ್ಷಕಿ ಹೇಮಲತಾ ಬಡಜಾತಿಯಾ, ಡಾ.ಸಚಿನ ಮನಗುತ್ತಿ, ಸಿಆರ್‌ಪಿ ಅಲ್ತಾಫ್ ಬಾಗಿ, ಮಕ್ಕಳ ಸಾಹಿತಿ ಡಾ.ಎಲ್.ಎಸ್. ಚೌರಿ, ಸಂಸ್ಥೆಯ ಅಧ್ಯಕ್ಷ ಪ್ರಮೋದ ಬಾಲೋಜಿ, ಪ್ರಾಚಾರ್ಯ ಪ್ರತಿಭಾ ಚಿಕ್ಕಬೀರೆ, ಮುಸ್ತಾಕ್ ಬಾಕಶಿರಾಜ, ಪ್ರವೀಣ ರತ್ತು, ಶಾಂತಿನಾತ ಹಂಜೆ, ಪುಷ್ಪದಂತ ರತ್ತು, ವೈಭವ ಹಂಜೆ, ಮೌನೇಶ ಸುತಾರ, ಬಾಬಾಸಾಬ ಕದ್ದು ಇತರರಿದ್ದರು. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬುಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net