ಮಾನವೀಯ ಮೌಲ್ಯ ಬಿತ್ತುವ ಕೆಲಸವಾಗಲಿ

1 hanumasagara 01
ಹನುಮಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಉದ್ಘಾಟಿಸಿದರು. ಸಾಹಿತಿ ರಾಮಚಂದ್ರ ಬಡಿಗೇರ, ಜನಪದ ಕಲಾವಿದ ಶರಣಪ್ಪ ವಡಗೇರಿ, ಕಸಾಪ ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ, ಪ್ರಾಚಾರ್ಯ ಸಾಹೇಬಗೌಡ ಬಿರದಾರ, ನಿವೃತ್ತ ಪ್ರಾಚಾರ್ಯ ಡಿ.ಬಿ.ಗಡೇದ, ಕಸಾಪ ಸ್ಥಳೀಯ ಘಟಕದ ಅಧ್ಯಕ್ಷ ಮಂಜುನಾಥ ಗುಳೆದಗುಡ್ಡ ಇತರರಿದ್ದರು.
Published on

ಹನುಮಸಾಗರ: ಆಕಾರದಲ್ಲಿ ಮನುಷ್ಯನಾಗಿದ್ದರೆ ಸಾಲದು ಆಚಾರ ವಿಚಾರದಲ್ಲಿಯೂ ಮನುಷ್ಯತ್ವ ಗುಣಗಳು ಇರಬೇಕು ಎಂದು ಸಾಹಿತಿ ರಾಮಚಂದ್ರ ಬಡಿಗೇರ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಸಾಪ ವತಿಯಿಂದ ಅಂದಾನಪ್ಪ ಸಾಂತಪ್ಪ ಅಗಸಿಮುಂದಿನ ಹಾಗೂ ಕಮಲಾಬಾಯಿ ಪಾಂಡುರಂಗ ಕೃಷ್ಣ ಕುಲಕರ್ಣಿ ಅವರ ಸ್ಮರಣಾರ್ಥ ಶನಿವಾರ ಏರ್ಪಡಿಸಿದ್ದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನು ಓದಿ:

ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸವಾಗಬೇಕು. ಸಂಸ್ಕೃತಿ, ಬದುಕು, ಭಾವನೆಗಳಿಗೆ ಧಕ್ಕೆ ಬಾರದಂತೆ ದುಶ್ಚಟಗಳನ್ನು ಬದಿಗಿರಿಸಿ ಆಧ್ಯಾತ್ಮ ಚಿಂತನೆಯಲ್ಲಿ ತೊಡಗಬೇಕು. ಮಕ್ಕಳಿಗೆ ಮಾನವೀಯ ಮೌಲ್ಯ, ಉತ್ತಮ ಸಂಸ್ಕಾರವುಳ್ಳ ಶಿಕ್ಷಣ ನೀಡಬೇಕಾಗಿದೆ. ಕನ್ನಡ ಭಾಷೆ ಅತ್ಯಂತ ಪವಿತ್ರವಾಗಿದ್ದು, ಅದನ್ನು ಮೈಲಿಗೆಯಾಗಲು ಬಿಡಬಾರದು. ಪ್ರತಿಯೊಬ್ಬರೂ ಕನ್ನಡ ಭಾಷೆ ಬಗ್ಗೆ ಗೌರವ ಹೊಂದಿರಬೇಕು. ನಾಡಿನ ಮಣ್ಣು ಹಾಗೂ ನೀರಿನ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಡಿ.ಬಿ.ಗಡೇದ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕಾವ, ಜಾಣ, ರತ್ನ ಮುಂತಾದ ಪರೀಕ್ಷೆಗಳಲ್ಲದೇ ಕನ್ನಡೇತರರಿಗೆ ಕನ್ನಡ ಪ್ರವೇಶ ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಶೈಕ್ಷಣಿಕ ಚಿಂತನೆಗೆ ಸಾಕ್ಷಿಯಾಗಿದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯ ಕುರಿತು ಎಂಫಿಲ್, ಪಿಎಚ್‌ಡಿ ನೀಡುತ್ತಿದ್ದು, ವಿವಿಧ ಪುಸ್ತಕಗಳ ಪ್ರಕಟಣೆ, ಗ್ರಂಥಾಲಯಗಳಲ್ಲಿ ಪುಸ್ತಕಗಳ ಮೂಲಕ ಶೈಕ್ಷಣಿಕ ಪ್ರಗತಿಯತ್ತ ಕಸಾಪ ದಾಪುಗಾಲು ಹಾಕುತ್ತಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜನಪದ ಕಲಾವಿದ ಶರಣಪ್ಪ ವಡಗರಿ ಜನಪದ ಗೀತೆಗಳನ್ನು ಹಾಡಿದರು. ಕಸಾಪ ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಹನಮಸಾಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಉದ್ಘಾಟಿಸಿದರು. ಪ್ರಾಚಾರ್ಯ ಸಾಹೇಬಗೌಡ ಬಿರಾದಾರ ನಾಡದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ರಾಜ್ಯ ಜಂಪ್‌ರೋಪ್ ಉಪಾಧ್ಯಕ್ಷ ಅಬ್ದುಲ್‌ಕರೀಮ ಒಂಟೆಳಿ, ಕಸಾಪ ತಾಲೂಕು ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಜಹಗೀರದಾರ, ಶರಣಪ್ಪ ವಡಿಗೇರಿ, ರವೀಂದ್ರ ಬಾಕಳೆ, ಎಚ್.ವಾಯ್.ಈಟಿಯವರ, ಕಾರ್ಯದರ್ಶಿ ಲೆಂಕಪ್ಪ ವಾಲೀಕಾರ, ರೇಖಾ ಚಿಕ್ಕುಮ್ಮಿ, ಸುನಿತಾ ಕೋಮಾರಿ, ಬಸಮ್ಮ ಹಿರೇಮಠ, ಮಹೇಶ ಹಡಪದ, ಹೋಬಳಿ ಕಸಾಪ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ, ಬಾಳಪ್ಪ ಪತ್ತಾರ, ಮಲ್ಲಪ್ಪ ಲಂಗಟದ, ಹೊನ್ನಪ್ಪ ಕೋಟಿ, ಗ್ಯಾನಪ್ಪ ತಳವಾರ, ವಿನೋದ ಪಾಟೀಲ, ಶಂಕರ ಬಸೂದೆ, ಮಹೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net