ವೃತ್ತಿಯಲ್ಲಿ ಪ್ರಾಮಾಣಿಕತೆ ಇರಲಿ

20 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ವನಿತಾ ಸೇವಾ ಸಮಾಜದ ವನಿತಾ ಶಿಕ್ಷಕಿಯರ ತರಬೇತಿ ಸಂಸ್ಥೆಯ ಪ್ರಸಕ್ತ ಸಾಲಿನ ದ್ವೀತಿಯ ಡಿಇಎಲ್​ಇಡಿ ಪ್ರಶಿಕ್ಷಣಾಥಿರ್ಗಳ ಬೀಳ್ಕೊಡುಗೆ ಸಮಾರಂಭ ಶನಿವಾರ ಜರುಗಿತು.
ವನಿತಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್​.ಬಿ. ದೊಡಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವನಿತಾ ಶಿಕ್ಷಕಿಯರ ತರಬೇತಿ ಸಂಸ್ಥೆ ಪ್ರತಿಷ್ಠಿತ ಸಂಸ್ಥೆ. ಇಲ್ಲಿ ಕಲಿತ ಸಹಸ್ರಾರು ಪ್ರಶಿಕ್ಷಣಾಥಿರ್ಗಳು ನಾಡಿನಾದ್ಯಂತ ಉತ್ತಮ ಶಿಕ್ಷಕರಾಗಿ ಶಿಕ್ಷಣ ಪಸರಿಸುವಲ್ಲಿ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಇಲ್ಲಿ ಇಂದಿಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ನಾಡಿನ ಹೆಸರಾಂತ ಸಂಸ್ಥೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪ್ರಕಾಶ ಸಿದ್ದಕ್ಕನವರ ಮಾತನಾಡಿ, ಪ್ರಶಿಕ್ಷಣಾಥಿರ್ಗಳು ಮುಂದಿನ ತಮ್ಮ ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕತೆ ಹಾಗೂ ಶ್ರದ್ಧೆ, ಸೇವಾ ಮನೋಭಾವ, ಜ್ಞಾನಾಭಿವೃದ್ಧಿ ಮೈಗೂಡಿಸಿಕೊಂಡು ಉತ್ತಮ ಶಿಕ್ಷಕರಾಗಿ ಹೊರಹೊಮ್ಮಬೇಕು ಎಂದರು.
ಪ್ರಶಿಕ್ಷಣಾಥಿರ್ಗಳಾದ ರೇಷ್ಮಾ ಮಾಂಡ್ರೆ, ನೇತ್ರಾವತಿ ಪೂಜಾರಿ, ರಶ್ಮಿ ದೇಸಾಯಿ ಅನುಭವ ಹಂಚಿಕೊಂಡರು. ಉಪನ್ಯಾಸಕರಾದ ರೂಪಶ್ರೀ ದೇಶಪಾಂಡೆ, ಸಂಧ್ಯಾ ವೈದ್ಯ, ಶೋಭಾ ಚಲವಾದಿ, ಇತರರು ಇದ್ದರು.
ಭಾಗ್ಯಶ್ರೀ ಕುಂಟೆ ಸ್ವಾಗತಿಸಿದರು. ಎಂ. ನಂದಿಯಾಳ ನಿರೂಪಿಸಿದರು. ರಶ್ಮಿ ಗುತ್ತೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net